ಮುರಿದು ಬಿದ್ದರೂ ತೆರವಾಗದ 60 ವರ್ಷಗಳ ಹಳೆಯ ಸೇತುವೆ!

Update: 2020-10-20 14:09 GMT

ಉಡುಪಿ, ಅ.20: ಅಪಾಯಕಾರಿ ಸ್ಥಿತಿಯಲ್ಲಿರುವ ಕೆಮ್ಮಣ್ಣು- ಪಡುಕುದ್ರು ಸ್ವರ್ಣ ನದಿ ಒಳಹರಿವು ಹಿನ್ನೀರು ಪ್ರದೇಶದಲ್ಲಿರುವ ಸಂಪರ್ಕ ಸೇತುವೆಯನ್ನು ಕೂಡಲೇ ತೆರವುಗೊಳಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಲೋಕೋಪಯೋಗಿ ಇಲಾಖೆಯಿಂದ ಸುಮಾರು 60 ವರ್ಷಗಳ ಹಿಂದೆ ಸ್ವರ್ಣ ನದಿಗೆ ಕೆಮ್ಮಣ್ಣು- ಪಡುಕುದ್ರು ಸಂಪರ್ಕಿಸಲು ಈ ಸೇತುವೆಯನ್ನು ನಿರ್ಮಿಸಲಾಗಿತ್ತು. ಕ್ರಮೇಣ ಶಿಥಿಲಾವಸ್ಥೆಗೆ ತಲುಪಿದ ಈ ಸೇತುವೆಯ ಒಂದೊಂದೆ ಭಾಗವೂ ಮುರಿದು ಬಿದ್ದು, ಕುಸಿಯುವ ಹಂತದಲ್ಲಿವೆ. 150 ಅಡಿಯಷ್ಟು ಉದ್ದವಿರುವ ಈ ಸೇತುವೆ, 20ರಿಂದ 25 ಅಡಿ ಯಷ್ಟು ಎತ್ತರವಿದೆ.

ಇದಕ್ಕೆ ಪರ್ಯಾಯವಾಗಿ 15 ವರ್ಷಗಳ ಹಿಂದೆ ಹೊಸ ಸೇತುವೆಯನ್ನು ನಿರ್ಮಿಸಲಾಗಿದ್ದು, ಸ್ಥಳೀಯರು ಅದನ್ನು ಉಪಯೋಗಿಸುತ್ತಿದ್ದಾರೆ. ಆದುದ ರಿಂದ ನಿರುಪಯುಕ್ತವಾಗಿರುವ ಮತ್ತು ಅಪಾಯಕಾರಿ ಮಟ್ಟಕ್ಕೆ ತಲುಪಿ, ಯಾವ ಸಂದರ್ಭದಲ್ಲೂ ಕುಸಿದು ನದಿ ಪಾಲಾಗುವ ಸ್ಥಿತಿಯಲ್ಲಿರುವ ಈ ಸೇತುವೆ ಯನ್ನು ತೆರವುಗೊಳಿಸುವಂತೆ ಒತ್ತಾಯ ಕೇಳಿಬರುತ್ತಿವೆ.

ಈ ನೀರಿನಲ್ಲಿ ಮೀನುಗಾರಿಕೆ ಸಣ್ಣ ದೋಣಿ, ಸರಕು ಸಾಗಣೆ ದೋಣಿಗಳು ಸಾಗುತ್ತಿರುತ್ತವೆ. ಆದುದರಿಂದ ಕುಸಿಯುವ ಸ್ಥಿತಿಯಲ್ಲಿರುವ ಈ ಸೇತುವೆಯ ಅಡಿಯಲ್ಲಿ ಸಂಚರಿಸುವ ದೋಣಿಗಳು ಮತ್ತು ನಾವಿಕರ ಜೀವಕ್ಕೆ ಅಪಾಯವಿದೆ ಎಂದು ಸ್ಥಳೀಯರು ದೂರಿದ್ದಾರೆ. ಸೇತುವೆ ನದಿಗೆ ಕುಸಿದು ಬಿದ್ದಲ್ಲಿ ಪರಿಸರಕ್ಕೆ ಗಂಭಿರ ಹಾನಿಯಾಗಲಿದೆ ಮತ್ತು ನದಿಯಲ್ಲಿ ನೀರು ಹರಿಯಲು ಸಮಸ್ಯೆಯಾಗಿ ತಡೆ ಉಂಟಾಗಲಿದೆ. ಆದುದರಿಂದ ಸೇತುವೆ ಕುಸಿಯುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಕೂಡಲೇ ತೆರವುಗಳಿಸಲು ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಕುಸಿದು ಬೀಳುವ ಹಂತದಲ್ಲಿರುವ ಕೆಮ್ಮಣ್ಣು- ಪಡುಕುದ್ರು ಶಿಥಿಲ ಸೇತುವೆಯ ಬಗ್ಗೆ ಲೋಕೊಪಯೋಗಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಸಾರ್ವಜನಿಕರ ದೂರು ಆಧರಿಸಿ ಸೇತುವೆಯನ್ನು ಶೀಘ್ರ ತೆರವುಗೊಳಿಸಬೇಕು ಎಂದು ತಿಳಿಸಲಾಗಿದೆ. ಅದರಂತೆ ಇಲಾಖೆ ಇಂಜಿನಿ ಯರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
- ಕಮಲ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಕೆಮ್ಮಣ್ಣು,

ಸಂಪೂರ್ಣ ಕುಸಿದು ಬೀಳುವ ಹಂತದಲ್ಲಿರುವ ಕೆಮ್ಮಣ್ಣು-ಪಡುಕುದ್ರು ಹಳೆಯ ಸೇತುವೆಯನ್ನು ಶೀಘ್ರ ತೆರವುಗೊಳಿಸಬೇಕು. ಒಂದು ವೇಳೆ ಈ ಸೇತುವೆ ಕುಸಿದು ಬಿದ್ದರೆ ಸ್ಥಳೀಯ ದೋಣಿಗಳ ಸಾಗಾಟಕ್ಕೆ ತೊಂದರೆಯಾಗ ಲಿದೆ. ಅದೇ ರೀತಿ ನೀರಿನಿಂದ ಈ ಸೇತುವೆಯ ಭಾಗಗಳನ್ನು ತೆರವುಗೊಳಿಸು ವುದು ಕೂಡ ಕಷ್ಟದ ಕೆಲಸ. ಇವುಗಳನ್ನು ಅರಿತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮ ತೆಗೆದುಕೊಳ್ಳಬೇಕು.
- ರಿಚರ್ಡ್ ಕೆಮ್ಮಣ್ಣು , ಸ್ಥಳೀಯರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News