ಬೀದಿನಾಯಿಗಳ ಕಾಟ: ಕಡಿತಕ್ಕೆ ಒಳಗಾದ ವೃದ್ದರ ರಕ್ಷಣೆ

Update: 2020-10-20 14:11 GMT

ಉಡುಪಿ, ಅ.20: ಉಡುಪಿ ಕಿನ್ನಿಮೂಲ್ಕಿಯ ಮುಖ್ಯರಸ್ತೆಯಲ್ಲಿ ಕಳೆದ ಕೆಲವು ದಿನಗಳಿಂದ ಬೀದಿನಾಯಿಯೊಂದು 50ಕ್ಕೂ ಅಧಿಕ ಮಂದಿಗೆ ಕಚ್ಚಿದ್ದು, ಇದೀಗ 75 ವರ್ಷದ ವೃದ್ಧರೊಬ್ಬರ ಮೇಲೂ ದಾಳಿ ನಡೆಸಿರುವ ಬಗ್ಗೆ ವರದಿಯಾಗಿದೆ.

ಕಡಿತಕ್ಕೆ ಒಳಗಾದ ವೃದ್ಧರನ್ನು ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅಂಬಲಪಾಡಿ ರಕ್ಷಿಸಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದಾರೆ. ಈವರೆಗೆ 50ಕ್ಕೂ ಹೆಚ್ಚು ಜನರಿಗೆ ಈ ನಾಯಿ ಕಡಿದಿದ್ದು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಬಹಳಷ್ಟು ಹಿರಿಯ ನಾಗರಿಕರು ಬೆಳಗಿನ ಜಾವ ಈ ಮಾರ್ಗವಾಗಿ ವಾಯು ವಿಹಾರಕ್ಕೆ ಸಂಚರಿಸುತ್ತಿದ್ದು, ಬೀದಿನಾಯಿಗಳು ಭಯದ ವಾತಾವರಣ ಸೃಷ್ಟಿಸಿವೆ. ನಗರಾಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಮುಂದಿನ ದುರಂತ ನಡೆಯದಂತೆ ಹಾಗೂ ಸಾರ್ವಜನಿಕರ ಭಯದ ವಾತಾವರಣ ನಿವಾರಿಸಲು ಕಚ್ಚುವ ನಾಯಿಗಳ ಬಗ್ಗೆ ಶೀಘ್ರ ಕ್ರಮತೆಗೆದುಕೊಳ್ಳಬೇಕು ಎಂದು ವಿಶು ಶೆಟ್ಟಿ ಅಂಬಲಪಾಡಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News