ಮಂಗಳೂರು: ಅ.21ಕ್ಕೆ ವಿವಿಧೆಡೆ ವಿದ್ಯುತ್ ನಿಲುಗಡೆ

Update: 2020-10-20 14:36 GMT

ಮಂಗಳೂರು, ಅ.20: ಕೊಣಾಜೆ, ಎಂಎಸ್‌ಇಝೆಡ್ ಉಪಕೇಂದ್ರದಿಂದ ಹೊರಡುವ ವಿವಿಧ ಫೀಡರ್‌ಗಳಲ್ಲಿ ಜಂಪರ್ ಬದಲಾವಣೆ, ಜಿಒಎಸ್ ದುರಸ್ತಿ ಕಾಮಗಾರಿಗಳನ್ನು ಹಮ್ಮಿಕೊಂಡಿದ್ದರಿಂದ ಅ.21ರಂದು ನಗರದ ವಿವಿಧೆಡೆ ವಿದ್ಯುತ್ ಸರಬರಾಜು ನಿಲುಗಡೆಯಾಗಲಿದೆ.

ಕೊಣಾಜೆ: ಅ.21ರಂದು ಬೆಳಗ್ಗೆ 10:30ರಿಂದ 5:30ರವರೆಗೆ 110/33/11ಕೆ.ವಿ. ಕೊಣಾಜೆ ಉಪಕೇಂದ್ರದಿಂದ ಹೊರಡುವ 11 ಕೆ.ವಿ. ಕೊಣಾಜೆ, ಉಳ್ಳಾಲ ಎಕ್ಸ್‌ಪ್ರೆಸ್, ಮಂಜನಾಡಿ ಹಾಗೂ 11 ಕೆ.ವಿ. ಕಿನ್ಯಾ ಫೀಡರ್‌ಗಳಲ್ಲಿ ದುರಸ್ತಿ ಕಾಮಗಾರಿ ಹಮ್ಮಿಕೊಂಡಿದಿದೆ. ಇದರಿಂದ ಕೊಣಾಜೆ, ಅಸೈಗೋಳಿ, ಕಿನ್ಯಾ, ಮಂಜನಾಡಿ, ದೇರಳಕಟ್ಟೆ, ಪನೀರ್, ನಾಟೇಕಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.

ಪೆರಾರ/ಈಶ್ವರಕಟ್ಟೆ: ಅ.21ರಂದು ಬೆಳಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ 220/110/11 ಕೆ.ವಿ. ಎಂಎಸ್‌ಇಝೆಡ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ. ಈಶ್ವರಕಟ್ಟೆ, ಪೆರಾರ, ಮತ್ತು ಸುಂಕದಕಟ್ಟೆ ಫೀಡರ್‌ನಲ್ಲಿ ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗಿದೆ.
ಇದರಿಂದ ಈಶ್ವರಕಟ್ಟೆ, ಕಿನ್ನಿಕಂಬ್ಳ, ಸುರಭಿಕಟ್ಟೆ, ಎರ್ಮೆಪದವು, ಹೊಗೆಪದವು, ಗುರುಕಂಬ್ಳ, ವಿಒಆರ್ ರಸ್ತೆ, ಕಂದಾವರ, ಪೆರಾರ, ಮಂಜನಕಟ್ಟೆ, ಗಣೇಶನಗರ, ಮುಂಡಬೆಟ್ಟು, ಕೊಂಪದವು, ನೆಲ್ಲಿಗುಡ್ಡೆ, ಓಂಕಾರಕಟ್ಟೆ, ಮೂಡುಪೆರಾರ ಚರ್ಚ್, ಪೂಮಾರ ಪದವು, ಸೌಹರ್ದನಗರ, ಜರಿನಗರ, ಸಿದ್ಧಾರ್ಥನಗರ, ಸುಂಕದಕಟ್ಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News