ಮೀಸಲು ಅರಣ್ಯದಲ್ಲಿ ಸರ್ವೆ: ಅರಣ್ಯ ವೀಕ್ಷಕರ ಕರ್ತವ್ಯಕ್ಕೆ ಅಡ್ಡಿ; ಆರೋಪ

Update: 2020-10-20 17:23 GMT

ಬೈಂದೂರು, ಅ.20: ಮೀಸಲು ಅರಣ್ಯದಲ್ಲಿ ಅನುಮತಿ ಇಲ್ಲದೆ ಸರ್ವೆ ಕಾರ್ಯ ನಡೆಸಿದಲ್ಲದೆ, ತಡೆಯಲು ಬಂದ ಅರಣ್ಯ ವೀಕ್ಷಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವುದಾಗಿ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾವಂತಗುಡ್ಡೆ ಮೀಸಲು ಅರಣ್ಯದೊಳಗಡೆ ಅ.18ರಂದು ಕುಶಾಲ ಶೆಟ್ಟಿ ಹಾಗೂ ಚಂದ್ರಶೇಖರ ಶೆಟ್ಟಿ ಎಂಬವರು ಸರ್ವೆ ಕಾರ್ಯ ನಡೆಸುತ್ತಿದ್ದು, ಈ ವೇಳೆ ಅರಣ್ಯ ವೀಕ್ಷಕ ಮಂಜುನಾಥ ದುರಗನ್ನನವರ ಸ್ಥಳದ ಕಂದಾಯ ದಾಖಲೆಗಳನ್ನು ಕೇಳಿ ಪಡೆದುಕೊಂಡು ಪರಿಶೀಲಿಸಿದರು.

ಆಗ ದುರ್ಗಿ ಹಾಗೂ ಚಿಕ್ಕಯ್ಯ ಪೂಜಾರಿ ಎಂಬವರ ಹೆಸರಿನಲ್ಲಿ ದಾಖಲಾತಿ ಇದ್ದು, ಸರ್ವೆ ಕಾರ್ಯ ನಡೆಸುತ್ತಿರುವವರು ಬೇರೆಯವರು ಎಂಬುದು ತಿಳಿದು ಬಂತು. ಸ್ಥಳದ ಮಂಜೂರಾತಿದಾರರಿಗೂ ಹಾಗೂ ಸರ್ವೆ ಕಾರ್ಯ ನಡೆಸುತ್ತಿ ರುವ ಯಾವುದೇ ರೀತಿಯ ಸಂಬಂಧ ಇಲ್ಲದಿರುವುದನ್ನು ಗಮನಿಸಿದ ಮಂಜು ನಾಥ್, ಸರ್ವೆ ಕಾರ್ಯಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಆಗ ಆರೋಪಿಗಳು ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಬೈಂದೂರು ವಲಯ ಅರಣ್ಯಾಧಿಕಾರಿ ಟಿ.ಕಿರಣ್ ಬಾಬು ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News