ಕಡಬ: ಜಾಗೋ ಕಿಸಾನ್ ಅಭಿಯಾನಕ್ಕೆ ಚಾಲನೆ

Update: 2020-10-20 17:46 GMT

ಕಡಬ: ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರ ಜಾರಿಗೆ ತಂದ ಕೃಷಿ ಮಸೂದೆ ವಿರುದ್ದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಜಾಗೋ ಕಿಸಾನ್- “ಕೃಷಿ ಸಂಹಾರ ಬಿಜೆಪಿಯ ಹುನ್ನಾರ” ಎಂಬ ಶೀರ್ಷಿಕೆಯಡಿ ದೇಶವ್ಯಾಪಿ ಅಭಿಯಾನವನ್ನು ಕೈಗೊಂಡಿದ್ದು ಇದರ ಅಂಗವಾಗಿ ಎಸ್.ಡಿ.ಪಿ.ಐ ದ.ಕ ಜಿಲ್ಲೆಯ ಉದ್ಘಾಟನಾ ಕಾರ್ಯಕ್ರಮ ಮಂಗಳವಾರ ಕಡಬದಲ್ಲಿ ನಡೆಯಿತು. 

ಕಡಬ ತಾಲೂಕು ಕಛೇರಿ ಮುಂಭಾಗದಲ್ಲಿ ಎಸ್ ಡಿಪಿಐ ಜಾಗೋ ಕಿಸಾನ್ ಅಭಿಯಾನದ ಜಿಲ್ಲಾ ಉಸ್ತುವಾರಿ ಆ್ಯಂಟನಿ ಪಿ.ಡಿಯವರು ಎಸ್ ಡಿಪಿಐ ಕಡಬ ತಾಲೂಕು ಅಧ್ಯಕ್ಷ ರಮ್ಲಾರವರಿಗೆ ಪಕ್ಷದ ದ್ವಜ ಹಸ್ತಾಂತರ ಮಾಡುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು.

ಕಲಾರದ ಭತ್ತದ ಗದ್ದೆಯಲ್ಲಿ ಭತ್ತದ ತೆನೆ ಕೊಯ್ಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಎಸ್.ಡಿ.ಪಿ.ಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಸ್.ಡಿ.ಪಿ.ಐ ರಾಜ್ಯ ಉಪಾಧ್ಯಕ್ಷ ಅಡ್ವಕೇಟ್ ಮಜೀದ್ ಖಾನ್, ಕರ್ನಾಟಕ ರೈತ ಸಂಘ ಹಸಿರು ಸೇನೆ ಜಿಲ್ಲಾದ್ಯಕ್ಷ, ರಾಜ್ಯ ಸಮಿತಿ ಸದಸ್ಯರಾದ ಸುರೇಶ್ ಭಟ್ ಕೊಜಂಬೆ, ಕರ್ನಾಟಕ ರೈತ ಸಂಘ ಹಸಿರು ಸೇನೆ ಕಡಬ ತಾಲೂಕು ಅಧ್ಯಕ್ಷ ವಿಕ್ಟರ್ ಮಾರ್ಟಿಸ್, ಜೆಡಿಎಸ್ ಮುಖಂಡ ಸೈಯದ್ ಮೀರಾ ಸಾಹೇಬ್, ಜಾಗೋ ಕಿಸಾನ್‌ನ ಜಿಲ್ಲಾ ಉಸ್ತುವಾರಿ ಆಂಟನಿಯವರು ಮಾತನಾಡಿದರು.

ವೇದಿಕೆಯಲ್ಲಿ ಎಸ್.ಡಿ.ಪಿ.ಐ. ಜಿಲ್ಲಾ ಪ್ರ. ಕಾರ್ಯದರ್ಶಿ ಶಾಹುಲ್ ಹಮೀದ್, ದಲಿತ ಮುಖಂಡ ಎಸ್.ಡಿ.ಪಿ.ಐ ಜಿಲ್ಲಾ ಸಮಿತಿಯ ಸದಸ್ಯ ಆನಂದ ಮಿತ್ತಬೈಲು, ಕಾರ್ಪೋರೇಟರ್ ಮುನೀಬ್ ಬೇಂಗ್ರೆ, ಪಿ.ಎಫ್.ಐ.ಉಪ್ಪಿನಂಗಡಿ ವಲಯಾಧ್ಯಕ್ಷ ಹಮೀದ್ ಮೆಜೆಸ್ಟಿಕ್, ದ.ಸಂ.ಸ. ಪುತ್ತೂರು ತಾಲೂಕು ಸಂಘಟನಾ ಸಂಚಾಲಕರಾದ ಬಾಬು ಸವಣೂರು, ಗಣೇಶ್ ಕುರಿಯಾನ,ಎಸ್.ಡಿ.ಪಿ.ಐ ಕಡಬ ತಾಲೂಕು ಅಧ್ಯಕ್ಷ ರಮ್ಲಾ ಸನ್‌ರೈಸ್, ಹಿರಿಯ ಕೃಷಿಕ ಅಬ್ದುಲ್ ಖಾದರ್ ಪರಪ್ಪು ಮೊದಲಾದವರು ಉಪಸ್ಥಿತರಿದ್ದರು. 

ಕಾರ್ಯಕ್ರಮದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ಹಿರಿಯರಾದ ಕುಂಞಿ, ಅಂಬೋಡಿ ಹಾಗೂ ಕಿರಿಯ ಕೃಷಿಕ ಮಹಮ್ಮದ್ ಅಲಿ ಅವರಿಗೆ ಪ್ರೊ.ನಂಜುಡ ಸ್ವಾಮಿ ಹೆಸರಿನಲ್ಲಿ ಸ್ಮರಣಿಕೆ ನೀಡಿ ಗೌರವಹಿಸಲಾಯಿತು.

ಸಾದಿಕ್ ಅತ್ತಾಜೆ ಸ್ವಾಗತಿಸಿದರು. ಎಸ್.ಡಿ.ಪಿ.ಐ. ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ವಂದಿಸಿದರು. ಕಡಬ ತಾಲೂಕು ಎಸ್ ಡಿಪಿಐ ಕಾರ್ಯದರ್ಶಿ ರಫೀಕ್ ನೆಲ್ಯಾಡಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News