ಅರ್ಚಕ ರಮೇಶ್‌ ಮೂಲ್ಯ ನಿಧನ

Update: 2020-10-21 05:33 GMT

ಬಂಟ್ವಾಳ: ಪಣೋಲಿ ಬೈಲು ದೇವಸ್ಥಾನದ ಅನುವಂಶಿಕ ಎರಡನೇ ಅರ್ಚಕ ರಮೇಶ್‌ ಮೂಲ್ಯ (55)ಅವರು ಇಂದು ಬೆಳಗ್ಗೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಅವರು ಕಳೆದ ಎರಡು ವಾರಗಳಿಂದ ನ್ಯುಮೋನಿಯಾ ಜ್ವರದಿಂದ ಬಳಲುತ್ತಿದ್ದು ಮಂಗಳೂರು ಖಾಸಗಿ ಆಸ್ಪತ್ರೆಯ ಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಅವರು ನಿನ್ನೆ ರಾತ್ರಿಯಿಂದ ಚಿಕಿತ್ಸೆಗೆ ಸ್ಪಂದಿಸಿದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ.

ಪತ್ನಿ ಮತ್ತು ಎರಡು ಗಂಡು ಒಂದು ಹೆಣ್ಣು ಹಾಗೂ ಮೊಮ್ಮಗಳು ಮತ್ತು ಅಪಾರ ಬಂಧುಗಳನ್ನು ಅವರು ಅಗಲಿದ್ದಾರೆ.

ರಮೇಶ್ ಅವರ ಪಾರ್ಥಿವ ಶರೀರವನ್ನು ಅವರ ಪಣೋಲಿಬೈಲಿನಲ್ಲಿರುವ ಮನೆಗೆ 10.30 ರ ವೇಳೆ ತರಲಿದ್ದು ಬಳಿಕ ಕಂಚಿನಡ್ಕ ಪದವಿನ ಸ್ಮಶಾನ ಭೂಮಿಯಲ್ಲಿ ಅಂತಿಮ ಸಂಸ್ಕಾರ ನಡೆಯುತ್ತದೆ ಎಂದು ಅವರ ಮಗ ಲೋಹಿತ್ ಪಣೋಲಿಬೈಲು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News