ಮಲ್ಪೆ: ಮೀನುಗಾರರ ಬಲೆಗೆ ಬಿದ್ದ 700 ಕೆಜಿ ತೂಕದ ಎರಡು ಕೊಂಬಿನ ತೊರಕೆ ಮೀನು

Update: 2020-10-21 08:36 GMT

ಮಲ್ಪೆ, ಅ.21: ಮಲ್ಪೆ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರಿಗೆ ಸುಮಾರು 700 ಹಾಗೂ 250 ಕೆ.ಜಿ ತೂಕದ ಎರಡು ಕೊಂಬಿನ ತೊರಕೆ ಮೀನುಗಳು ಸಿಕ್ಕಿದೆ.

ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ನಾಗ ಸಿದ್ದ ಬೋಟ್ ಗೆ ಈ ಮೀನುಗಳು ಸಿಕ್ಕಿದ್ದು, ಮೀನನ್ನು ಉತ್ತಮ ಬೆಲೆಗೆ ಮಾರಾಟ ಮಾಡಲಾಗಿದೆ ಎಂದು ಬೋಟ್ ಮಾಲಕ ಸುಭಾಸ್ ಸಾಲಿಯಾನ್ ತಿಳಿಸಿದ್ದಾರೆ.

ಇದು ಅಪರೂಪದ ಮೀನಾಗಿದ್ದು, ಈ ವರ್ಷದ ಮಲ್ಪೆ ಆಳ ಸಮುದ್ರದಲ್ಲಿ ಸಿಕ್ಕ ಭಾರೀ ತೂಕದ ಮೀನು ಇದಾಗಿದೆ. ಮೀನನ್ನು ಬೋಟ್ ನಿಂದ ಕ್ರೈನ್ ಮೂಲಕ ತೆಗೆಯಲಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News