ಶ್ರೀನಿವಾಸ್ ವಿವಿಯ 2ನೇ ವಾರ್ಷಿಕ ಘಟಿಕೋತ್ಸವ

Update: 2020-10-21 12:06 GMT

ಮಂಗಳೂರು, ಅ.20: ಶ್ರೀನಿವಾಸ್ ವಿವಿಯ 2ನೇ ವಾರ್ಷಿಕ ಘಟಿಕೋತ್ಸವವು ನಗರದ ಪಾಂಡೇಶ್ವರದಲ್ಲಿರುವ ಶ್ರೀನಿವಾಸ್ ವಿವಿಯ ಸಿಟಿ ಕ್ಯಾಂಪಸ್‌ನಲ್ಲಿ ಮಂಗಳವಾರ ನಡೆಯಿತು.

ವರ್ಚುವಲ್ ಮೂಲಕ ಘಟಿಕೋತ್ಸವವನ್ನುದ್ದೇಶಿ ಮಾತನಾಡಿದ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ ನಾರಾಯಣ್ ಶ್ರೀನಿವಾಸ್ ವಿವಿಯು ಉದ್ಯಮಶೀಲ ತರಗತಿವಾರು ಪಠ್ಯಕ್ರಮಗಳನ್ನು ಅನುಸರಿಸುತ್ತಿರುವುದು ಶ್ಲಾಘನೀಯ ಎಂದರು.

ಉಡುಪಿಯ ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿ ಮಾತನಾಡಿ ವಿಶ್ವವಿದ್ಯಾಲಯಗಳ ಪರಿಕಲ್ಪನೆಯು ಅಂದಿನ ಕಾಲದ ನಳಂದಾ, ತಕ್ಷಶಿಲೆಗಳಿಂದ ಇಂದಿನವರೆಗೂ ಬೆಳೆದು ಬಂದಿದೆ. ವಿದ್ಯಾರ್ಥಿಗಳ ಬೆಳವಣಿಗೆಗೆ ವಿಶ್ವವಿದ್ಯಾನಿಲಯಗಳು ಮಹತ್ತರವಾದ ಪಾತ್ರವನ್ನು ವಹಿಸುತ್ತದೆ ಎಂದರು.

ಶ್ರೀನಿವಾಸ್ ವಿವಿಯ ಕುಲಾಧಿಪತಿ ಸಿಎ. ಎ.ರಾಘವೇಂದ್ರ ರಾವ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಘಟಿಕೋತ್ಸವದಲ್ಲಿ 232 ಪದವಿ ಹಾಗೂ 87 ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು, ಒಬ್ಬ ಸಂಶೋಧನಾ ವಿದ್ಯಾರ್ಥಿಗೆ ಪಿ.ಎಚ್‌ಡಿ ಪದವಿ, 1 ಡಿಲಿಟ್ ಪದವಿ ಸಹಿತ 38 ರ್ಯಾಂಕ್‌ಗಳೊಂದಿಗೆ 11 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು.

ಕುಲಸಚಿವ (ಅಭಿವೃದ್ಧಿ) ಡಾ. ಅಜಯ್ ಕುಮಾರ್, ಆಡಳಿತ ಮಂಡಳಿಯ ಟ್ರಸ್ಟಿಗಳಾದ ಜಯಲಕ್ಷ್ಮಿ ಆರ್. ರಾವ್, ಪ್ರೊ. ಎ. ಮಿತ್ರಾ ಎಸ್. ರಾವ್, ಕುಲಸಚಿವ ಆದಿತ್ಯ ಕುಮಾರ್ (ಶೈಕ್ಷಣಿಕ ಮತ್ತು ಅಭಿವೃದ್ಧಿ) ಉಪಸ್ಥಿತರಿದ್ದರು.

ಸಹ ಕುಲಾಧಿಪತಿ, ಡಾ ಎ. ಶ್ರೀನಿವಾಸ್ ರಾವ್ ಸ್ವಾಗತಿಸಿದರು. ಕುಲಪತಿ ಡಾ. ಪಿ.ಎಸ್. ಐತಾಳ್ ವರದಿ ವಾಚಿಸಿದರು. ಕುಲಸಚಿವ ಡಾ. ಅನಿಲ್ ಕುಮಾರ್ ವಂದಿಸಿದರು. ರೋಹನ್ ಫೆನಾರ್ಂಡಿಸ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News