ರೈತರ ಸ್ವಾಭಿಮಾನಕ್ಕೆ ಬೆಲೆ ಕಟ್ಟಲು ಅಸಾಧ್ಯ: ವಿನಯಕುಮಾರ್ ಸೊರಕೆ

Update: 2020-10-21 12:45 GMT

ಉದ್ಯಾವರ, ಅ.21: ರಾಜ್ಯದಲ್ಲಿ ಭೂಸುಧಾರಣಾ ಕಾಯ್ದೆಯನ್ನು ದೇವರಾಜ ಅರಸು ಸರಕಾರ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ದ್ದರಿಂದ ಸಾಕಷ್ಟು ಮಂದಿ ಸ್ವಂತ ಕೃಷಿ ಭೂಮಿಯನ್ನು ಹೊಂದುವುದು ಸಾಧ್ಯವಾಯಿತು. ಆದರೆ ಇಂದಿನ ಯುವ ಜನತೆ ಭೂಸುಧಾರಣಾ ಕಾಯ್ದೆ ಯಿಂದ ದೊರೆತ ಲಾಭವನ್ನು ಸಂಪೂರ್ಣವಾಗಿ ಮರೆತು ವರ್ತಿಸುತ್ತಿರುವುದು ಬೇಸರದ ವಿಷಯ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.

ಬುಧವಾರ ಉದ್ಯಾವರದಲ್ಲಿ ನಡೆದ ಕಾಪು ವಿಧಾನಸಭಾ ಕ್ಷೇತ್ರ ಉತ್ತರ ವಲಯದ ಕಿಸಾನ್ ಘಟಕದ ಬ್ಲಾಕ್ ಮಟ್ಟದ ಪದಾಧಿಕಾರಿಗಳ ಸಭೆ ಯನ್ನುದ್ದೇಶಿ ಮಾತನಾಡಿದ ಸೊರಕೆ, ಕೃಷಿಕನಾಗಿ ತನ್ನ ಅನುಭವವನ್ನು ಹಂಚಿಕೊಂಡರು. ರೈತರ ಸ್ವಾಭಿಮಾನಕ್ಕೆ ಬೆಲೆ ಕಟ್ಟಲು ಅಸಾಧ್ಯ ಎಂದವರು ನುಡಿದರು.

ಉಡುಪಿ ಜಿಲ್ಲಾ ಕಿಸಾನ್ ಘಟಕದ ಅಧ್ಯಕ್ಷ ಎಲ್ಲೂರು ಶಶಿಧರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಾಂಗ್ರೆಸ್ ಪಕ್ಷ ರೈತರ ಪರವಾಗಿ ನಡೆಸಿದ ಹೋರಾಟದ ಬಗ್ಗೆ ತಿಳಿಸಿ, ಮುಂಬರುವ ಗ್ರಾಪಂ ಚುನಾವಣೆಯನ್ನು ಎದುರಿಸುವ ಬಗ್ಗೆ ಈಗಲೇ ರೂಪುರೇಷೆಗಳನ್ನು ರೂಪಿಸುವಂತೆ ತಿಳಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಪ್ರಗತಿಪರ ಕೃಷಿಕ ಹಾಗೂ ಜಿಲ್ಲಾ ಮತ್ತು ರಾಜ್ಯಮಟ್ಟದ ಪ್ರಶಸ್ತಿ ಪಡೆದ ರಾಘವೇಂದ್ರ ನಾಯ್ಕ, ಸರಕಾರದ ವಿವಿಧ ಇಲಾಖೆಗಳಲ್ಲಿ ಕೃಷಿಕರಿಗೆ ಸಿಗುವ ಸವಲತ್ತುಗಳ ಬಗ್ಗೆ ವಿವರಿಸಿದರು.

ಕಾಂಗ್ರೆಸ್ ಮುಖಂಡ ಉದ್ಯಾವರ ನಾಗೇಶ್ ಕುಮಾರ್ ಮಾತನಾಡಿ, ಪಕ್ಷದ ಕಿಸಾನ್‌ಘಟಕವನ್ನು ಇನ್ನಷ್ಟು ಬಲಪಡಿಸುವಂತೆ ಸೂಚಿಸಿ ದರಲ್ಲದೇ, ಸುಗ್ರೀವಾಜ್ಞೆ ದುರುಪಯೋಗಿಸಿಕೊಂಡು ಹೊಸ ಕೃಷಿ ಮಸೂದೆಗಳನ್ನು ಒತ್ತಡ ಪೂರ್ವಕ ಹೇರಿಕೆಯ ಬಗ್ಗೆ ಎಚ್ಚರಿಸಿದರು.

ಸಭೆಯಲ್ಲಿ ಉದ್ಯಾವರ ಗ್ರಾಮದ ಕೃಷಿಕರಾದ ಜಯಕುಮಾರ್ ಹಾಗೂ ರಿಚರ್ಡ್ ಫೆನಾರ್ಂಡಿಸ್‌ರನ್ನು ಸನ್ಮಾನಿಸಲಾಯಿತು. ಜಿಲ್ಲಾ ಕಿಸಾನ್ ಘಟಕದ ಕಾರ್ಯದರ್ಶಿ ಉದಯ ಹೇರೂರು ಹಾಗೂ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಕುಮಾರ್ ಸಭೆಯಲ್ಲಿ ಭಾಗವಸಿದ್ದರು.

ಅಧ್ಯಕ್ಷತೆಯನ್ನು ಬ್ಲಾಕ್‌ನ ಕಿಸಾನ್ ಘಟಕದ ಅಧ್ಯಕ್ಷ ಸುಂದರ್ ಪೂಜಾರಿ ವಹಿಸಿದ್ದರು. ಉದ್ಯಾವರ ಕಿಸಾನ್ ಘಟಕ ಹಾಗೂ ಉಡುಪಿ ಜಿಲ್ಲಾ ಕಿಸಾನ್ ಘಟಕದ ಉಪಾಧ್ಯಕ್ಷ ಶೇಖರ ಕೋಟ್ಯಾನ್ ಸ್ವಾಗತಿಸಿದರು. ಕಿಸಾನ್ ಘಟಕದ ರಾಜ್ಯ ಕಾರ್ಯದರ್ಶಿ ರೋಯ್ಸ ಫೆರ್ನಾಂಡಿಸ್ ವಂದಿಸಿದರು. ಸತ್ಯಾನಂದ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News