ಜಯ ಸುವರ್ಣ ಮೇರು ಶಿಖರಕ್ಕೇರಿದ ಮಹಾನ್ ವ್ಯಕ್ತಿ, ಅದ್ಭುತ ಸಾಧಕ: ಚಂದ್ರಶೇಖರ ಸ್ವಾಮೀಜಿ

Update: 2020-10-21 12:53 GMT

ಮುಲ್ಕಿ : ಜಯ ಸುವರ್ಣರು ಓರ್ವ ಉತ್ತಮ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಯಶಸ್ವೀ ಭಾರತ್ ಬ್ಯಾಂಕಿನ ಶಿಲ್ಪಿ, ಉದ್ಯೋಗದಾತ, ಚತುರ ಸಂಘಟಕರಾಗಿದ್ದು ಮೇರು ಶಿಖರಕ್ಕೇರಿದ ಅದ್ಭುತ ವ್ಯಕ್ತಿ ಮಹಾನ್ ಸಾಧಕ ಎಂದು ಬೆಂಗಳೂರಿನ ಅಂತರಾಷ್ಟ್ರೀಯ ವಾಸ್ತುತಜ್ಞ ಹಾಗು ವೈಜ್ಞಾನಿಕ ಜ್ಯೋತಿಷಿ ಚಂದ್ರಶೇಖರ ಸ್ವಾಮೀಜಿ ಹೇಳಿದ್ದಾರೆ.

ಅವರು ತಮ್ಮ ಆಶ್ರಮದ ವತಿಯಿಂದ ನಿಧನರಾದ ಜಯ ಸುವರ್ಣ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು.

ಜಯ ಸುವರ್ಣ ರವರ ನಿಧನಕ್ಕೆ ಮುಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು, ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಅಭಯ ಚಂದ್ರ ಜೈನ್, ಉದ್ಯಮಿ ಅರವಿಂದ್ ಪೂ೦ಜ ಕಾರ್ನಾಡು, ಕರ್ನಾಟಕ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಧಾರ್ಮಿಕ ಪರಿಷತ್ ಸದಸ್ಯರಾದ ಭುವನಾಭಿರಾಮ ಉಡುಪ, ನಿಡ್ಡೋಡಿ ಚಾವಡಿ ಮನೆ ಜಗನ್ನಾಥ ಶೆಟ್ಟಿ, ಗಿರಿ ಪ್ರಕಾಶ್ ತಂತ್ರಿ ಪೊಳಲಿ, ಮುಂಬೈಮಾಜೀ ಬಂಟರ ಸಂಘದ ಅಧ್ಯಕ್ಷ  ಭುಜಂಗ ಶೆಟ್ಟಿ, ಚಂದ್ರಶೇಖರ ಸ್ವಾಮೀಜಿ ಆಶ್ರಮದ ನಿರ್ದೇಶಕಿ ರಜನಿ ಸಿ ಭಟ್, ರೋಶನಿ ಭಟ್, ರಾಹುಲ್ ಸಿ ಭಟ್, ಆಶ್ರಮದ ಸಂಚಾಲಕರಾದ ಪುನೀತ್ ಕೃಷ್ಣ ,ಮುಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ರಮೇಶ್ ಕೊಕ್ಕರಕಲ್, ಕೋಶಾಧಿಕಾರಿ ಪ್ರಕಾಶ್ ಸುವರ್ಣ, ತಾ. ಪಂ. ಸದಸ್ಯ ಶರತ್ ಕುಬೆವೂರು, ಮುಲ್ಕಿ ರೋಟರಿ ಕ್ಲಬ್ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ರಂಗಕರ್ಮಿ ಚಂದ್ರಶೇಖರ ಸುವರ್ಣ ಮುಲ್ಕಿ, ಕಿಶೋರ್ ಶೆಟ್ಟಿ ಬಪ್ಪನಾಡು, ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು, ಕೆಪಿಸಿಸಿ ಕೋಆರ್ಡಿನೇಟರ್ ವಸಂತ್ ಬೆರ್ನಾಡ್, ದಯಾನಂದ ಮಟ್ಟು,ಮುಲ್ಕಿ ಲಯನ್ಸ್ ಕ್ಲಬ್ ನಿಕಟಪೂರ್ವ ಅಧ್ಯಕ್ಷ ವೆಂಕಟೇಶ ಹೆಬ್ಬಾರ್, ಉದಯ ಅಮಿನ ಮಟ್ಟು, ವಿನೋದ್ ಸಾಲ್ಯಾನ್ ಬೆಳ್ಳಾಯರು, ಗೌತಂ ಜೈನ್ ಮುಲ್ಕಿ ಅರಮನೆ, ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ವಾಲ್ಟರ್ ಡಿಸೋಜ ಪಕ್ಷಿಕೆರೆ,  ಉದಯಕುಮಾರ್ ಶೆಟ್ಟಿ ಶಿಮಂತೂರು, ಧರ್ಮಾನಂದ ಶೆಟ್ಟಿಗಾರ್ ತೋಕೂರು, ಪ್ರಾಣೇಶ್ ಹೆಜಮಾಡಿ, ಅಬ್ದುಲ್ ರಜಾಕ್ ಮುಲ್ಕಿ ಮತ್ತಿತರರು ತೀವ್ರ ಸಂತಾಪ ಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News