ಅ.27ರಂದು ‘ಯಕ್ಷಾರಾಧನೆ’ ರಂಗ ಮಹೋತ್ಸವ

Update: 2020-10-21 13:12 GMT

ಉಡುಪಿ, ಅ.21: ನೀಲ್ಕೋಡು ಅಭಿನೇತ್ರಿ ಆರ್ಟ್ ಟ್ರಸ್ಟ್ ವತಿಯಿಂದ ‘ಯಕ್ಷಾರಾಧನೆ’ ರಂಗ ಮಹೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವು ಅ.27ರಂದು ಸಂಜೆ 4:30ಕ್ಕೆ ಉಡುಪಿ ಮಥುರಾ ಛತ್ರದಲ್ಲಿ ನಡೆಯಲಿದೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೀಲ್ಕೋಡು ಅಭಿನೇತ್ರಿ ಆರ್ಟ್ ಟ್ರಸ್ಟ್‌ನ ಯಕ್ಷಗಾನ ಕಲಾವಿದ ನೀಲ್ಕೋಡು ಶಂಕರ್ ಹೆಗಡೆ, ಸಮಾರಂಭದಲ್ಲಿ ಕಣ್ಣಿ ಪ್ರಶಸ್ತಿಯನ್ನು ಗೋಪಾಲ ಆಚಾರ್ ತೀರ್ಥಹಳ್ಳಿ, ಅಭಿನೇತ್ರಿ ಪ್ರಶಸ್ತಿಯನ್ನು ಎಂ.ಕೆ.ರಮೇಶ್ ಆಚಾರ್ ಕಟ್ಟೆಹಕ್ಲು ಅವರಿಗೆ ಪ್ರದಾನ ಮಾಡಲಾಗುವುದು ಎಂದರು.

ಕಾರ್ಯಕ್ರಮವನ್ನು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ ಉದ್ಘಾಟಿಸಲಿರುವರು. ಅಧ್ಯಕ್ಷತೆಯನ್ನು ಮಾಹೆ ಕುಲ ಸಚಿವ ಡಾ. ನಾರಾಯಣ ಸಭಾಹಿತ್ ವಹಿಸಲಿರುವರು. ಪ್ರಸಾದ್ ಕುಮಾರ್ ಮೊಗೆಬೆಟ್ಟು ಅವರಿಗೆ ಗೌರವ ಸಮ್ಮಾನ ಮಾಡಲಾಗುವುದು.

ಸಭಾ ಕಾರ್ಯಕ್ರಮದ ಬಳಿಕ ಐತಿಹಾಸಿಕ ಕಥಾನಕ ಪ್ರಸಾದ ಮೊಗೆಬೆಟ್ಟು ವಿರಚಿತ ಯಕ್ಷಗಾನ ಶ್ರೀಧಾರೇಶ್ವರರ ನಿರ್ದೇಶನದಲ್ಲಿ ‘ಹಾಸ್ಯರತ್ನ ತೆನಾಲಿರಾಮ ಕೃಷ್ಣ’ ಪ್ರದರ್ಶನಗೊಳ್ಳಲಿದೆ. ಕಲಾಭಿಮಾನಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇಡೀ ಕಾರ್ಯಕ್ರಮವನ್ನು ಫೇಸ್‌ಬುಕ್, ಯೂಟ್ಯೂಬ್‌ನಲ್ಲಿ ನೇರಪ್ರಸಾರ ಮಾಡಲಾುವುದು ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಲಾಸಕ್ತರಾದ ನಿತ್ಯಾನಂದ ನಾಯಕ್ ನರಸಿಂಗೆ, ಶಂಕರ್ ಬಡಗುಬೆಟ್ಟು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News