ವ್ಯಕ್ತಿಗಳ ನಡುವಿನ ಅನುಸಂಧಾನವೇ ಮಾತೃಭಾಷಾ ಅಸ್ಮಿತೆ: ಡಾ. ಹಳೆಮನೆ

Update: 2020-10-21 13:14 GMT

ಶಿರ್ವ, ಅ.21: ಶಿರ್ವ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ ಮಾತೃ ಭಾಷೆಯ ಅಸ್ಮಿತೆ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವು ಅ.20ರಂದು ಕಾಲೇಜಿನಲ್ಲಿ ಜರಗಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಜಿರೆಯ ಶ್ರೀಮಂಜುನಾಥೇಶ್ವರ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ.ರಾಜಶೇಖರ್ ಹಳೆಮನೆ ಮಾತನಾಡಿ, ಮಾತೃಭಾಷಾ ಅಸ್ಮಿತೆ ಅಂದರೆ ವ್ಯಕ್ತಿಗಳ ನಡುವಿನ ಅನುಸಂಧಾನ. ಅದಕ್ಕೆ ಯಾವುದೇ ಗೋಡೆ ಗಳಿಲ್ಲ. ಮಾತೃಭಾಷೆ ನೆಲದ ಅಂತಸತ್ವವನ್ನು ಒಳಗೊಂಡಿರುತ್ತದೆ. ಸಂಸ್ಕೃತಿಯನ್ನು ತಾನೆತಾನಾಗಿ ಸೃಷ್ಠಿಸುತ್ತದೆ ಎಂದು ಹೇಳಿದರು.

ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಡಾ.ನಯನ ಎಂ.ಪಕ್ಕಳ ವಹಿಸಿ ದ್ದರು. ಡಾ.ಮಿಥುನ್ ಚಕ್ರವರ್ತಿ ಸ್ವಾಗತಿಸಿದರು. ಪ್ರೊ.ರಘರಾವು ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News