ಮಲ್ಪೆ: ಬಲೆಗೆ ಬಿದ್ದ ಬೃಹತಾಕಾರದ ತೊರಕೆ ಮೀನುಗಳು !

Update: 2020-10-21 15:43 GMT

ಉಡುಪಿ, ಅ.21: ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮೂರು ಬೋಟುಗಳ ಬಲೆಗೆ ಬೃಹತ್ ಆಕಾರದ ನಾಲ್ಕು ತೊರಕೆ ಮೀನುಗಳು ಬಿದ್ದಿವೆ.

ಮಲ್ಪೆಯ ಸುಭಾಸ್ ಸಾಲಿಯಾನ್ ಎಂಬವರ ನಾಗಸಿದ್ಧಿ ಹೆಸರಿನ ಬೋಟಿಗೆ 700 ಕೆ.ಜಿ ಹಾಗೂ 250ಕೆ.ಜಿ. ತೂಕದ ಮತ್ತು ಪ್ರಕಾಶ್ ಬಂಗೇರ ಎಂಬವರ ಕುಲಮಾಸ್ತಿ ಹೆಸರಿನ ಬೋಟಿಗೆ 550 ಕೆ.ಜಿ. ತೂಕದ ಒಟ್ಟು ಮೂರು ತೊರಕೆ ಮೀನುಗಳು ಸಿಕ್ಕಿವೆ. ಅದೇ ರೀತಿ ಇನ್ನೊಂದು ಬೋಟಿಗೂ ನೂರಾರು ಕೆ.ಜಿ. ತೂಕದ ಒಂದು ಮೀನು ಸಿಕ್ಕಿರುವ ಬಗ್ಗೆ ವರದಿಯಾಗಿದೆ.

ಇಂದು ಮಲ್ಪೆ ಬಂದರಿಗೆ ಆಗಮಿಸಿದ ಈ ಬೋಟುಗಳಿಂದ ಬೃಹತ್ ಆಕಾರದ ಮೀನುಗಳನ್ನು ಕ್ರೇನ್ ಸಹಾಯದಿಂದ ಕೆಳಗೆ ಇಳಿಸಲಾಯಿತು. ಈ ವರ್ಷದ ಮಲ್ಪೆ ಆಳಸಮುದ್ರದಲ್ಲಿ ಸಿಕ್ಕ ಭಾರಿ ತೂಕದ ಮೀನುಗಳು ಇವಾಗಿವೆ. ಕಪ್ಪು ತೊರಕೆ ಮೀನಿಗೆ ಬೇಡಿಕೆ ಕಡಿಮೆ ಇದ್ದು, ಕೆ.ಜಿ.ಗೆ 40 ರೂ.ನಂತೆ ಸ್ಥಳೀಯರಿಗೆ ಈ ಮೀನುಗಳನ್ನು ಮಾರಾಟ ಮಾಡಲಾಗಿದೆ ಎಂದು ಬೋಟು ಮಾಲಕರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News