ಮಾಸ್ಕ್: 20,200ರೂ. ದಂಡ ವಸೂಲಿ

Update: 2020-10-21 15:23 GMT

ಉಡುಪಿ, ಅ.21: ಜಿಲ್ಲೆಯ ಸಾರ್ವಜನಿಕ ಸ್ಥಳಗಳಲ್ಲಿ ಅ.20ರಂದು ಮಾಸ್ಕ್ ಧರಿಸದೆ ಓಡಾಡುತ್ತಿದ್ದ 202 ಮಂದಿಯಿಂದ ಒಟ್ಟು 20,200ರೂ. ದಂಡ ವಸೂಲಿ ಮಾಡಲಾಗಿದೆ.

ನಗರ ಸ್ಥಳೀಯಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ 6300ರೂ., ಪಂಚಾಯತ್ ವ್ಯಾಪ್ತಿಯಲ್ಲಿ 1100ರೂ., ಪೊಲೀಸ್ ಇಲಾಖೆ 11,900ರೂ., ಅಬಕಾರಿ ಇಲಾಖೆ 100ರೂ., ಕಂದಾಯ ಇಲಾಖೆ 800ರೂ. ದಂಡ ವಸೂಲಿ ಮಾಡಿವೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 13,66,450ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News