ಫೇಸ್‌ಬುಕ್‌ನಲ್ಲಿ ಎಡಿಟ್ ಫೋಟೋ ಹಾಕಿ ಅವಹೇಳನ: ದೂರು

Update: 2020-10-21 15:25 GMT

ಉಡುಪಿ, ಅ.1: ವ್ಯಕ್ತಿಯೊಬ್ಬರ ಎಡಿಟ್ ಮಾಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಂದೂರು ತಾಲೂಕಿನ ಶಿರೂರು ನಿವಾಸಿ ಅವಿನಾಶ್ ಶೆಟ್ಟಿ(30) ಎಂಬವರ ಫೋಟೋವನ್ನು ಜೀವನ್ ಶೆಟ್ಟಿ ಎಂಬ ಫೇಸ್‌ಬುಕ್ ಖಾತೆದಾರ ಎಲ್ಲಿಂದಲೋ ಕದ್ದು, ಅದನ್ನು ದುರ್ಬಳಕೆ ಮಾಡಿದ್ದು, ಆ ಫೋಟೋವನ್ನು ಅರ್ಧ ಹೆಣ್ಣು ರೀತಿಯಲ್ಲಿ ಎಡಿಟ್ ಮಾಡಿ, ಅಪಹಾಸ್ಯ ಮಾಡುವ ರೀತಿ ಯಲ್ಲಿ ಶೀರ್ಷಿಕೆ ನೀಡಿ, ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದಾನೆ ಎಂದು ದೂರಲಾಗಿದೆ.

ಹೀಗೆ ಜೀವನ್ ಶೆಟ್ಟಿ ನನ್ನ ಫೋಟೋವನ್ನು ಹಾಕಿ ಸಮಾಜದಲ್ಲಿ ಅಪಹಾಸ್ಯ ಹಾಗೂ ಮುಜುಗರ ಉಂಟು ಮಾಡಿದ್ದಾನೆ ಎಂದು ಅವಿನಾಶ್ ಶೆಟ್ಟಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News