ಆದಿತ್ಯನಾಥ ಸರಕಾರವನ್ನು ತಕ್ಷಣವೇ ವಜಾಗೊಳಿಸಿ: ಮಾಜಿ ಶಾಸಕ ವಸಂತ ಬಂಗೇರ ಆಗ್ರಹ

Update: 2020-10-21 16:43 GMT

ಬೆಳ್ತಂಗಡಿ :  ಉತ್ತರಪ್ರದೇಶ ಸಿಎಂ ಆದಿತ್ಯನಾಥ್ ನಾಡಿನಲ್ಲಿ ದಲಿತ ಯುವತಿಯ ಅತ್ಯಾಚಾರ ಮತ್ತು ಕೊಲೆಕೃತ್ಯ ನಡೆದಿದ್ದು ದೇಶವೇ ತಲೆತಗ್ಗಿಸುವ ಕೆಲಸ ಆಗಿದೆ. ಪೊಲೀಸರ ಮೇಲೆ ಒತ್ತಡ ಹೇರಿ ಮೃತ ಯುವತಿಯ ಮನೆಯವರಿಗೆ ಮೃತದೇಹದ ಮುಖದರ್ಶನಕ್ಕೂ ಅವಕಾಶ ನೀಡದೆ ದುರಹಂಕಾರ ಮೆರೆಯಲಾಗಿದೆ. ಅಂತಹಾ ನೀಚ ಸರಕಾರವನ್ನು ತಕ್ಷಣವೇ ವಜಾ ಮಾಡಬೇಕು ಎಂದು ಮಾಜಿ ಶಾಸಕ ವಸಂತ ಬಂಗೇರ ಆಗ್ರಹಿಸಿದರು.

ಉತ್ತರಪ್ರದೇಶದ ಹತ್ರಾಸ್‍ನಲ್ಲಿ ನಡೆದ ದಲಿತ ಯುವತಿಯ ಅತ್ಯಾಚಾರ ಮತ್ತು ಕೊಲೆ ಕೃತ್ಯವನ್ನು ಖಂಡಿಸಿ ಬ್ಲಾಕ್ ಕಾಂಗ್ರೆಸ್ ನಗರ ಮತ್ತು ಗ್ರಾಮೀಣ ಘಟಕಗಳ ನೇತೃತ್ವದಲ್ಲಿ ಅ. 21 ರಂದು ಬೆಳ್ತಂಗಡಿ ಮಿನಿ ವಿಧಾನ ಸೌಧದ ಮುಂದೆ ನಡೆದ ಪ್ರತಿಭಟನೆಯನ್ನುದ್ಧೇಶಿಸಿ ಅವರು ಮಾತನಾಡುತ್ತಿದ್ದರು.

ದೇಶದಲ್ಲಿ ಇಂತಹಾ ಕೃತ್ಯಗಳು ನಡೆಯುತ್ತದೆ ಎಂದರೆ ಜನ ಯಾರಲ್ಲಿ ನ್ಯಾಯ ಕೇಳುವುದು ಎಂದು ಅರಿಯದೆ ಭಯಭೀತರಾಗಿದ್ದಾರೆ. ಈ ಘಟನೆಯನ್ನು ಹಾಲಿ ನ್ಯಾಯಾಧೀಶರ ಮುಖಾಂತರ ತನಿಖೆಗೊಳಪಡಿಸಬೇಕು ಎಂದು ಕಾಂಗ್ರೆಸ್ ಪಕ್ಷ ರಾಷ್ಟ್ರಪತಿಗಳನ್ನು ಆಗ್ರಹಿಸುತ್ತದೆ ಎಂದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಗಂಗಾಧರ ಗೌಡ, ಡಿಎಸ್‍ಎಸ್ ರಾಜ್ಯ ಸಂಘಟನಾ ಸಂಚಾಲಕ ಚಂದು ಎಲ್,
 ಕಾರ್ಮಿಕ ಮುಂದಾಳು ಬಿ.ಎಮ್ ಭಟ್  ಮಾತನಾಡಿದರು.

ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ರಂಜನ್ ಜಿ ಗೌಡ, ಜಿ.ಪಂ ಸದಸ್ಯರಾದ ಶೇಖರ್ ಕುಕ್ಕೇಡಿ, ನಮಿತಾ ಕೆ ಪೂಜಾರಿ, ಪಿ ಧರಣೇಂದ್ರ ಕುಮಾರ್, ಕೆ.ಕೆ ಶಾಹುಲ್ ಹಮೀದ್, ತಾ.ಪಂ ಅಧ್ಯಕ್ಷೆ ದಿವ್ಯಜ್ಯೋತಿ, ಸದಸ್ಯರಾದ ಜಯಶೀಲಾ, ಪ್ರವೀಣ್ ಗೌಡ, ಸೆಬಾಸ್ಟಿಯನ್ ವಿ.ಟಿ, ಕೇಶವತಿ, ಜಯರಾಮ, ವಿವಿಧ ಘಟಕಗಳ ಮುಖಂಡರುಗಳಾದ ಬಿ ಅಶ್ರಫ್ ನೆರಿಯ, ಅಯ್ಯೂಬ್ ಡಿ.ಕೆ, ಮನೋಹರ್ ಇಳಂತಿಲ, ದಯಾನಂದ ಪಿ ಬೆಳಾಲು, ಚಿದಾನಂದ ಎಲ್ದಡ್ಕ, ಉಷಾ ಶರತ್, ಝೊಹರಾ, ಜಯವಿಕ್ರಮ ಕಲ್ಲಾಪು, ಇಸುಬು ಇಳಂತಿಲ, ಅಬ್ದುಲ್ ರಹಿಮಾನ್ ಪಡ್ಪು, ಮೆಹಬೂಬ್, ವಿನ್ಸೆಂಟ್ ಟಿ ಡಿಸೋಜಾ, ಯಶೋಧರ ಬಂಗೇರ, ನಾರಾಯಣ ಗೌಡ ಮುಂಡಾಜೆ, ಹರ್ಷಲತಾ, ನಾಗರಾಜ್ ಲಾಯಿಲ, ಎ.ಸಿ ಮ್ಯಾಥ್ಯೂ, ಅಬ್ದುಲ್ ರಝಾಕ್ ತೆಕ್ಕಾರು, ಅರೆಕ್ಕಲ್ ಮಮ್ಮಿಕುಂಞ, ನವೀನ್ ರೈ, ಭರತ್ ಕುಮಾರ್, ಸೆಬಾಸ್ಟಿಯನ್ ಕೊಕ್ಕಡ, ಮೂಸೆಕುಂಞ ನೆರಿಯ, ಜೆಸಿಂತಾ ಮೋನಿಸ್, ಪ್ರಭಾಕರ ಶಾಂತಿಕೋಡಿ, ರೋಯಿ ಜೋಸೆಫ್, ಅಬ್ದುಲ್ ಗಫೂರ್ ಪುದುವೆಟ್ಟು, ಐ.ಎಲ್ ಪಿಂಟೋ ಮೊದಲಾದವರು ಭಾಗಿಯಾಗಿದ್ದರು.

ಪ್ರತಿಭಟನೆಗೂ ಮುನ್ನ ಮಾಜಿ ಶಾಸಕ ವಸಂತ ಬಂಗೇರರರ ಕಚೇರಿ ಬಳಿಯಿಂದ ಮಿನಿ ವಿಧಾನ ಸೌಧದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಬಳಿಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News