ತಮಿಳುನಾಡಿನಲ್ಲೂ ಉಚಿತ ಕೊರೋನ ಲಸಿಕೆ: ಪಳನಿಸ್ವಾಮಿ ಘೋಷಣೆ

Update: 2020-10-22 11:53 GMT

ಚೆನ್ನೈ: ಬಿಹಾರ ವಿಧಾನಸಭೆಯ ಚುನಾವಣೆಯ ಪ್ರಣಾಳಿಕೆಯಲ್ಲಿ ಬಿಜೆಪಿ ಪಕ್ಷ ಉಚಿತವಾಗಿ ಕೊರೋನ ಲಸಿಕೆ ವಿತರಿಸುವ ಭರವಸೆ ನೀಡಿ ವಿವಾದಕ್ಕೆ ಸಿಲುಕಿದ ಬೆನ್ನಿಗೇ ತಮಿಳುನಾಡು ಸರಕಾರ ಕೂಡ ಉಚಿತ ಲಸಿಕೆ ನೀಡುವ ಘೋಷಣೆ ಮಾಡಿದೆ. 

ಬಿಜೆಪಿಯ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿರುವ ಆಕ್ರೋಶ ತಣ್ಣಗಾಗುವ ಮೊದಲೇ ತಮಿಳುನಾಡು ಮುಖ್ಯಮಂತ್ರಿ ಇ.ಪಳನಿಸ್ವಾಮಿ ಮುಂದಿನ ವರ್ಷದ ವಿಧಾನಸಭೆ ಚುನಾವಣೆಯನ್ನುದೃಷ್ಟಿಯಲ್ಲಿಟ್ಟುಕೊಂಡು ರಾಜ್ಯದ ಜನತೆಗೆ ಉಚಿತ ಕೊರೋನ ಲಸಿಕೆ ಒದಗಿಸುವ ಭರವಸೆ ನೀಡಿದ್ದಾರೆ.

ಕೋವಿಡ್-19 ಲಸಿಕೆ ಸಿದ್ಧವಾದ ತಕ್ಷಣವೇ ಅದನ್ನು ರಾಜ್ಯದ ಎಲ್ಲ ಜನತೆಗೂ ಉಚಿತವಾಗಿ ನೀಡಲಾಗುವುದು ಎಂದು ಪಳನಿಸ್ವಾಮಿ ಗುರುವಾರ ಘೋಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News