ಎಚ್-1ಬಿ ಸಂಬಂಧಿ ವಾಣಿಜ್ಯ ವೀಸಾಗಳಿಗೆ ಮಾರ್ಪಾಡು ಪ್ರಸ್ತಾವ: ನೂರಾರು ಭಾರತೀಯರ ಮೇಲೆ ವ್ಯತಿರಿಕ್ತ ಪರಿಣಾಮ

Update: 2020-10-22 16:29 GMT

ವಾಶಿಂಗ್ಟನ್, ಅ. 22: ಎಚ್-1ಬಿ ವೀಸಾ ಸಂಬಂಧಿ ಉದ್ಯೋಗಗಳಿಗಾಗಿ ತಾತ್ಕಾಲಿಕ ವಾಣಿಜ್ಯ ವೀಸಾಗಳನ್ನು ನೀಡದಿರುವ ಪ್ರಸ್ತಾಪವೊಂದನ್ನು ಅಮೆರಿಕದ ವಿದೇಶಾಂಗ ಇಲಾಖೆ ಮುಂದಿಟ್ಟಿದೆ. ಈ ಪ್ರಸ್ತಾಪವು ನೂರಾರು ಭಾರತೀಯರ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರಬಹುದಾಗಿದೆ.

 ಅಮೆರಿಕದಲ್ಲಿ ನಿರ್ದಿಷ್ಟ ಅತ್ಯುನ್ನತ ಕೌಶಲದ ಕೆಲಸವೊಂದನ್ನು ಮಾಡುವುದಕ್ಕಾಗಿ ಆ ದೇಶಕ್ಕೆ ವಿದೇಶಗಳಿಂದ ಸ್ವಲ್ಪ ಸಮಯದ ಮಟ್ಟಿಗೆ ತಾಂತ್ರಿಕ ಉದ್ಯೋಗಿಗಳನ್ನು ಕಳುಹಿಸಿಕೊಡಲು ವಿದೇಶಿ ಕಂಪೆನಿಗಳಿಗೆ ಈ ಮಾದರಿಯ ವಾಣಿಜ್ಯ ವೀಸಾಗಳು ಅವಕಾಶ ಮಾಡಿಕೊಡುತ್ತವೆ.

 ಈ ವೀಸಾಗಳು ವಿದೇಶಿ ಉದ್ಯೋಗಿಗಳಿಗೆ ಅವೆುರಿಕ ಪ್ರವೇಶಿಸಲು ಪರ್ಯಾಯ ಮಾರ್ಗಗಳನ್ನು ಒದಗಿಸುತ್ತವೆ ಹಾಗೂ ಅಮೆರಿಕದ ಉದ್ಯೋಗಿಗಳ ಹಿತಾಸಕ್ತಿಯನ್ನು ಕಾಪಾಡುವುದಕ್ಕಾಗಿ ಸಂಸತ್ತು ಕಾಂಗ್ರೆಸ್ ರೂಪಿಸಿರುವ ನಿರ್ಬಂಧಗಳನ್ನು ಉಪೇಕ್ಷಿಸಲು ಉದ್ಯೋಗಿಗಳು ಮತ್ತು ಅವರ ಉದ್ಯೋಗದಾತರನ್ನು ಪ್ರೇರೇಪಿಸಬಹುದು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ವಿದೇಶಾಂಗ ಇಲಾಖೆಯು ಹೇಳಿದೆ.

ನವೆಂಬರ್ 3ರಂದು ನಡೆಯಲಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಪ್ರಸ್ತಾಪವನ್ನು ಟ್ರಂಪ್ ಆಡಳಿತ ರೂಪಿಸಿದೆ ಎನ್ನಲಾಗಿದೆ. ಸಂಭಾವ್ಯ ನೂತನ ನಿಯಮವು, ಅಮೆರಿಕದಲ್ಲಿ ಕೆಲಸ ಪೂರ್ಣಗೊಳಿಸಲು ಕಿರು ಅವಧಿಗಾಗಿ ಆ ದೇಶಕ್ಕೆ ಬಿ-1 ವೀಸಾಗಳಡಿಯಲ್ಲಿ ತಮ್ಮ ತಂತ್ರಜ್ಞಾನ ಪರಿಣತರನ್ನು ಕಳುಹಿಸುವ ಹಲವಾರು ಭಾರತೀಯ ಕಂಪೆನಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News