ರೈಲ್ವೆಯ 11.58 ಲಕ್ಷ ಗಝೆಟೆಡ್ ಅಲ್ಲದ ಉದ್ಯೋಗಿಗಳಿಗೆ 78 ದಿನಗಳ ಬೋನಸ್

Update: 2020-10-22 17:05 GMT

ಹೊಸದಿಲ್ಲಿ, ಅ. 22: ತನ್ನ ಗಝೆಟೆಡ್ ಅಲ್ಲದ 11.58 ಲಕ್ಷ ಉದ್ಯೋಗಿಗಳಿಗೆ 2019-20ನೇ ಹಣಕಾಸು ವರ್ಷದ 78 ದಿನಗಳ ವೇತನವನ್ನು ಬೋನಸ್ ಮಂಜೂರು ಮಾಡಲಾಗಿದೆ ಎಂದು ರೈಲ್ವೆ ಗುರುವಾರ ಹೇಳಿದೆ.

ರೈಲ್ವೆ ಉದ್ಯೋಗಿಗಳಿಗೆ ಮಂಜೂರು ಮಾಡಲಾದ ಒಟ್ಟು ಬೋನಸ್‌ನ ಮೊತ್ತ ಅಂದಾಜು 2,081.68 ಕೋಟಿ ರೂಪಾಯಿ ಆಗಲಿದೆ. 2019-2020 ಹಣಕಾಸು ವರ್ಷದ 78 ದಿನಗಳ ವೇತನವನ್ನು ರೈಲ್ವೆಯ ಗಝೆಟೆಡ್ ಅಲ್ಲದ ಅರ್ಹ ಉದ್ಯೋಗಿಗಳಿಗೆ (ಆರ್‌ಪಿಎಫ್/ಆರ್‌ಪಿಎಸ್‌ಎಫ್ ಸಿಬ್ಬಂದಿ ಹೊರತುಪಡಿಸಿ) ಬೋನಸ್ ನೀಡುವ ರೈಲ್ವೆ ಸಚಿವಾಲಯದ ಪ್ರಸ್ತಾಪವನ್ನು ಬುಧವಾರ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಅಂಗೀಕರಿಸಲಾಗಿತ್ತು. ರೈಲ್ವೆಯ ಗಝೆಟ್ ಅಲ್ಲದ ಉದ್ಯೋಗಿಗಳಿಗೆ 78 ದಿನಗಳ ವೇತನವನ್ನು ಬೋನಸ್ ನೀಡುವುದರಿಂದ ಅಂದಾಜು 2,081.68 ಕೋಟಿ ರೂಪಾಯಿ ಆರ್ಥಿಕ ಹೊರೆ ಬೀಳಲಿದೆ. ರೈಲ್ವೆಯ ಗಝೆಟೆಡ್ ಅಲ್ಲದ ಉದ್ಯೋಗಿಗಳಿಗೆ ಬೋನಸ್ ಪಾವತಿಗೆ ತಿಂಗಳಿಗೆ 7 ಸಾವಿರ ರೂಪಾಯಿ ಮೂಲ ವೇತನ ಮಿತಿ ನಿಗದಿಪಡಿಸಲಾಗಿದೆ. ರೈಲ್ವೆಯ ಅರ್ಹ ಉದ್ಯೋಗಿಗಳಿಗೆ 78 ದಿನಗಳಿಗೆ ನೀಡಬೇಕಾದ ಗರಿಷ್ಠ ಮೊತ್ತ 17,957 ರೂಪಾಯಿ. ಈ ನಿರ್ಧಾರದಿಂದ ಸುಮಾರು 11.58 ಲಕ್ಷ ಗಝೆಟೆಡ್ ಅಲ್ಲದ ಉದ್ಯೋಗಿಗಳು ಸೌಲಭ್ಯ ಪಡೆಯಲಿದ್ದಾರೆ ಎಂದು ರೈಲ್ವೆಯ ಹೇಳಿಕೆ ತಿಳಿಸಿದೆ. ದೇಶಾದ್ಯಂತ ಇರುವ ರೈಲ್ವೆಯ ಎಲ್ಲ ಗಝೆಟಡ್ ಅಲ್ಲದ ಉದ್ಯೋಗಿ (ಆರ್‌ಪಿಎಫ್/

 ಆರ್‌ಪಿಎಸ್‌ಎಫ್ ಸಿಬ್ಬಂದಿಯನ್ನು ಹೊರತುಪಡಿಸಿ) ಗಳನ್ನು ರೈಲ್ವೆಯ ಈ ಬೋನಸ್ ಒಳಗೊಳ್ಳಲಿದೆ. ಪ್ರತಿವರ್ಷ ದಸರಾ ಅಥವಾ ಪೂಜಾ ರಜೆಯ ಮುನ್ನ ರೈಲ್ವೆಯ ಅರ್ಹ ಉದ್ಯೋಗಿಗಳಿಗೆ ಈ ಬೋನಸ್ ನೀಡಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News