ಬಿಹಾರ ಜನತೆಗೆ ಉಚಿತ ಕೊರೋನ ಲಸಿಕೆ ಭರವಸೆ: ಬಿಜೆಪಿ ವಿರುದ್ಧ ಅಕಾಲಿದಳ ವಾಗ್ದಾಳಿ

Update: 2020-10-22 17:22 GMT

ಹೊಸದಿಲ್ಲಿ: ಚುನಾವಣೆ ಹೊಸ್ತಿಲಲ್ಲಿರುವ ಬಿಹಾರದ ಜನತೆ ಉಚಿತವಾಗಿ ಕೊರೋನ ವೈರಸ್ ಲಸಿಕೆ ನೀಡುವ ಬಿಜೆಪಿಯ ಪ್ರಣಾಳಿಕೆಯಲ್ಲಿನ ಭರವಸೆಗೆ ಇತ್ತೀಚೆಗಷ್ಟೇ ಬಿಜೆಪಿಯ ಮೈತ್ರಿ ಕಡಿದುಕೊಂಡಿರುವ ಶಿರೋಮಣಿ ಅಕಾಲಿ ದಳ ಆಕ್ರೋಶ ವ್ಯಕ್ತಪಡಿಸಿದೆ.

“ಬಿಹಾರದಲ್ಲಿ ಮಾತ್ರ ಉಚಿತ ಲಸಿಕೆ. ಇದೊಂದು ಹಾಸ್ಯಾಸ್ಪದವಾಗಿದೆ.  ಇಡೀ ದೇಶ ತೆರಿಗೆ ಪಾವತಿಸುತ್ತಿಲ್ಲವೇ? ಅವರೆಲ್ಲರೂ ದೇಶದ ಸಮಾನ ನಾಗರಿಕರಲ್ಲವೇ? ಇಡೀ ದೇಶಕ್ಕೆ ಲಸಿಕೆ ಒದಗಿಸುವುದು ಕೇಂದ್ರ ಸರಕಾರದ ಕರ್ತವ್ಯ. ಜೀವವನ್ನುಕಾಪಾಡುವ ಲಸಿಕೆಯನ್ನು ಮತದ ಸಾಧನವಾಗಿ ಬಳಸುವುದು ಸಂಪೂರ್ಣ ಅನೈತಿಕ’’ ಎಂದು ನರೇಂದ್ರ ಮೋದಿ ಸರಕಾರದಲ್ಲಿ ಸಚಿವೆಯಾಗಿದ್ದು, ಇತ್ತೀಚೆಗಷ್ಟೇ ಆ ಸ್ಥಾನವನ್ನುತ್ಯಜಿಸಿರುವ ಅಕಾಲಿದಳ ಸಂಸದೆ ಹರ್ ಸಿಮ್ರತ್ ಕೌರ್ ಬಾದಲ್ ಟ್ವೀಟಿಸಿದ್ದಾರೆ.

ಕೌರ್ ಕೇಂದ್ರ ಸರಕಾರದ ವಿರುದ್ಧ ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್, ಆಪ್ ಇತರ ಪ್ರತಿಪಕ್ಷಗಳೊಂದಿಗೆ ಧ್ವನಿಗೂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News