ತನ್ನಿರುಪಂತ, ಕರಾಯ ಗ್ರಾಮ: ಎಸ್.ಡಿ.ಪಿ.ಐ ಅಭ್ಯರ್ಥಿಗಳ ಘೋಷಣೆ

Update: 2020-10-24 06:43 GMT

ಬೆಳ್ತಂಗಡಿ : ತಣ್ಣೀರುಪಂತ ಮತ್ತು ಕರಾಯ ಗ್ರಾಮ ಪಂಚಾಯತ್ ಚುನಾವಣೆಯ ಅಭ್ಯರ್ಥಿಗಳ ಪ್ರಥಮ ಪಟ್ಟಿ ಘೋಷಣಾ ಕಾರ್ಯಕ್ರಮ ಕಲ್ಲೇರಿ ಅಂಬೇಡ್ಕರ್ ಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಪಿ.ಐ ತಣ್ಣೀರುಪಂತ ಮತ್ತು ಕರಾಯ ಗ್ರಾಮ ಸಮಿತಿ ಅಧ್ಯಕ್ಷ ನವಾಝ್ ಕುದ್ರಡ್ಕ ವಹಿಸಿದ್ದರು.

ಎಸ್.ಡಿ.ಪಿ.ಐ ಕರ್ನಾಟಕ ರಾಜ್ಯ ನಾಯಕರಾದ ಶಾಫಿ ಬೆಳ್ಳಾರೆ ಮುಖ್ಯ ಅತಿಥಿಯಾಗಿ ಭಾಗವಹಿಸಿ "ಸಂವಿಧಾನ ವಿರೋಧಿಗಳ ಹಾಗೂ ಅನ್ಯಾಯ, ಅಕ್ರಮಗಳ ವಿರುದ್ಧದ ನಮ್ಮ ಹೋರಾಟವನ್ನು ಗ್ರಾಮ ಪಂಚಾಯಿತ್ ಒಳಗೂ ಮುಂದುವರಿಸಲು ಹಾಗೂ ತಮ್ಮ ಊರನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ನಮ್ಮ ಅಭ್ಯರ್ಥಿಗಳಿಗೆ ಸಂಪೂರ್ಣ ಬೆಂಬಲ ನೀಡಬೇಕಾಗಿದೆ" ಎಂದು ಹೇಳಿದರು.

ಎಸ್.ಡಿ.ಪಿ.ಐ ಬೆಳ್ತಂಗಡಿ ವಿಧಾನ ಸಭಾ ಅಧ್ಯಕ್ಷ ಹೈದರ್ ನೀರ್ಸಾಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಅಭ್ಯರ್ಥಿಗಳ ಘೋಷಣೆ ಮಾಡಿದರು.

ತನ್ನಿರುಪಂತ ಮತ್ತು ಕರಾಯ ಗ್ರಾಮ ಪಂಚಾಯತ್ ಪ್ರಥಮ‌‌ ಹಂತದ 12 ಅಭ್ಯರ್ಥಿಗಳ ವಿವರ

ತನ್ನಿರುಪಂತ ವಾರ್ಡ್ ನಂ - 01

1. ಮಹಮ್ಮದ್ ನಿಸಾರ್ ಕುದ್ರಡ್ಕ.
2. ನಸೀರ ಬಾನು.
3. ಅವ್ವಮ್ಮ

ತನ್ನಿರುಪಂತ ವಾರ್ಡ್ ‌ನಂ -02

1. ಶರಫುದ್ದಿನ್
2. ಅಬ್ದುಲ್ ಅಝೀಝ್.
3. ಝುಬೈದ

ಕರಾಯ ವಾರ್ಡ್ ನಂ - 01

1. ಜಮಾಲ್

 ಕರಾಯ ವಾರ್ಡ್ ನಂ- 02

1. ಇಲ್ಯಾಸ್ ಕರಾಯ
2. ಝುಬೈದ

ಕರಾಯ ವಾರ್ಡ್ ನಂ- 03.

1. ಮುಹಮ್ಮದ್ ನವಾಝ್
2. ಅಶ್ರಫ್ ಕಲ್ಲೇರಿ.
3. ಝುಬೈದ   ಕೆ       

ಈ ಸಂಧರ್ಭದಲ್ಲಿ ಪಕ್ಷದ ಸಿದ್ದಂತಗಳನ್ನು ಒಪ್ಪಿ ಸುಮಾರು 50ಕ್ಕೂ ಅಧಿಕ ಮಂದಿ ಪಕ್ಷಕ್ಕೆ ಸೇರ್ಪಡೆಯಾದರು.

ವೇದಿಕೆಯಲ್ಲಿ ಎಸ್.ಡಿ.ಪಿ.ಐ ಬೆಳ್ತಂಗಡಿ ತಾಲೂಕು ಉಪಾಧ್ಯಕ್ಷ ಶುಕೂರು ಕುಪ್ಪೆಟ್ಟಿ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮಡಂತ್ಯಾರ್ ವಲಯ ಅಧ್ಯಕ್ಷ ರಝಾಕ್ ಬಿ ಎಂ, ಎಸ್.ಡಿ.ಪಿ.ಐ ಬೆಳ್ತಂಗಡಿ ತಾಲೂಕು ಸಮಿತಿ ಸದಸ್ಯರಾದ ಮುಹಮ್ಮದ್ ನಿಸಾರ್ ಕುದ್ರಡ್ಕ, ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಕಲ್ಲೇರಿ ವಲಯ ಅಧ್ಯಕ್ಷ ಮುಸ್ತಫಾ ಪೆರ್ನೆ, ತಣ್ಣೀರುಪಂತ ಮತ್ತು ಕರಾಯ ಗ್ರಾಮ ಪಂ. ಚುನಾವಣೆ ಉಸ್ತುವಾರಿ ಲತೀಫ್ ಪುಂಜಾಲಕಟ್ಟೆ, ಎಸ್.ಡಿ.ಪಿ.ಐ ಕರಾಯ ಬ್ರಾಂಚ್ ಅಧ್ಯಕ್ಷ ಸೇಕುಂಞಿ ಮುಂತಾದವರು ಉಪಸ್ಥಿತರಿದ್ದರು.

ರವೂಫ್ ಪುಂಜಾಲಕಟ್ಟೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News