ಅಕ್ರಮ ದನದ ಮಾಂಸ ಸಾಗಾಟ ಪತ್ತೆ

Update: 2020-10-24 14:36 GMT

ಮಂಗಳೂರು, ಅ.24: ಟೆಂಪೋದಲ್ಲಿ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು ಎನ್ನಲಾದ ಸುಮಾರು 200 ಕಿ.ಗ್ರಾಂ ದನದ ಮಾಂಸವನ್ನು ಶನಿವಾರ ಕುದ್ರೋಳಿ ಸಮೀಪ ವಶಕ್ಕೆ ಪಡೆಯಲಾಗಿದೆ.

ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸುತ್ತಿದ್ದಂತೆ ಆರೋಪಿಗಳು ಟೆಂಪೋ ಬಿಟ್ಟು ಪರಾರಿಯಾಗಿದ್ದಾರೆ. ಈ ಬಗ್ಗೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಟೆಂಪೋ ಮಂಗಳೂರಿನದ್ದು ಎಂದು ಪೊಲೀಸರು ತಿಳಿಸಿದ್ದಾರೆ.

ಅ.13ರಂದು ಹಾಲು ಸಾಗಾಟದ ವಾಹನದಲ್ಲಿ ದನದ ಮಾಂಸ ಸಾಗಾಟ ಮಾಡಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೆ, ಅ.18ರಂದು ಮೀನು ಸಾಗಾಟ ವಾಹನದಲ್ಲಿ ಕೂಡ ಅಕ್ರಮ ದನದ ಮಾಂಸ ಸಾಗಾಟ ನಡೆದ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News