ಗಾಂಧಿಧಾಮ-ತಿರುನಲ್ವೇಲಿ ನಡುವೆ ಸಾಪ್ತಾಹಿಕ ರೈಲು

Update: 2020-10-24 14:39 GMT

ಉಡುಪಿ, ಅ.24: ಗುಜರಾತ್‌ನ ಗಾಂಧಿಧಾಮ ಹಾಗೂ ತಿರುನಲ್ವೇಲಿ ಜಂಕ್ಷನ್ ನಡುವೆ ಹಬ್ಬದ ಸಾಪ್ತಾಹಿಕ ವಿಶೇಷ ರೈಲು ಕೊಂಕಣ ರೈಲು ಮಾರ್ಗ ದಲ್ಲಿ ಓಡಾಟ ನಡೆಸಲಿದೆ. ಪೂರ್ವ ಕಾಯ್ದಿರಿಸುವಿಕೆಯ ಮೂಲಕ ಈ ರೈಲಿನಲ್ಲಿ ಪ್ರಯಾಣಿಸಲು ಅವಕಾಶವಿದೆ.

ರೈಲು ನಂ.09424 ಗಾಂಧಿಧಾಮದಿಂದ ಅ.26ರ ಸೋಮವಾರ ಅಪರಾಹ್ನ 2 ಕ್ಕೆ ಹೊರಡಲಿದ್ದು, ಮೂರನೇ ದಿನ ಬೆಳಗ್ಗೆ 11:30ಕ್ಕೆ ತಿರುನಲ್ವೇಲಿ ತಲುಪಲಿದೆ. ನ.1ರ ಬಳಿಕ ಪ್ರತಿ ಸೋಮವಾರ ಬೇಸಿಗೆ ವೇಳಾಪಟ್ಟಿಯಂತೆ ಇದೇ ಸಮಯದಲ್ಲಿ ಓಡಾಟ ನಡೆಸಲಿದೆ.

ರೈಲು ನಂ.09423 ಅ.29ರ ಗುರುವಾರ ಬೆಳಗ್ಗೆ 7:45ಕ್ಕೆ ತಿರುನಲ್ವೇಲಿ ಯಿಂದ ಹೊರಟು ಮೂರನೇ ದಿನ ಬೆಳಗ್ಗೆ 6:40ಕ್ಕೆ ಗಾಂಧಿಧಾಮ ತಲುಪಲಿದೆ. ನ.1ರ ಬಳಿಕ ಪ್ರತಿ ಗುರುವಾರ ಬೆಳಗ್ಗೆ 7:45ಕ್ಕೆ ತಿರುನಲ್ವೇಲಿಯಿಂದ ಪ್ರಯಾಣ ಬೆಳೆಸಿ ಮೂರನೇ ದಿನ ಬೆಳಗ್ಗೆ 4:30ಕ್ಕೆ ಗಾಂಧಿಧಾಮ ತಲುಪಲಿದೆ ಎಂದು ಕೊಂಕಣ ರೈಲ್ವೆಯ ಪ್ರಕಟಣೆ ತಿಳಿಸಿದೆ.

ಈ ರೈಲಿಗೆ ಅಹ್ಮದಾಬಾದ್ ಜಂಕ್ಷನ್, ವಡೋದರಾ ಜಂಕ್ಷನ್, ಸೂರತ್, ವಾಸೈ ರೋಡ್, ಪನ್ವೇಲ್, ರತ್ನಗಿರಿ, ಮಡಗಾಂವ್ ಜಂಕ್ಷನ್, ಕಾರವಾರ, ಮಂಗಳೂರು ಜಂಕ್ಷನ್, ಕೋಝಿಕೋಡ್, ಶೊರೋನೂರ್ ಜಂಕ್ಷನ್, ತ್ರಿಶೂರ್, ಎರ್ನಾಕುಲಂ ಜಂಕ್ಷನ್, ಕಯಾಮ್‌ಕುಲಂ ಜಂಕ್ಷನ್, ತಿರುವನಂತಪುರಂ ಸೆಂಟ್ರಲ್ ಹಾಗೂ ನಾಗರಕೊಯಿಲ್ ಟೌನ್ ಸ್ಟೇಶನ್‌ಗಳಲ್ಲಿ ನಿಲುಗಡೆ ಇರುತ್ತದೆ.

ಈ ರೈಲು ಒಟ್ಟು 22 ಕೋಚ್‌ಗಳನ್ನು ಹೊಂದಿದ್ದು, 2ಟಯರ್ ಎಸಿ ಒಂದು ಕೋಚ್, 3ಟಯರ್ ಎಸಿ 5ಕೋಚ್, ಸ್ಲೀಪರ್ 10 ಕೋಚ್, ಸೆಕೆಂಡ್ ಸೀಟಿಂಗ್ 4 ಕೋಚ್ ಹಾಗೂ ಎಸ್‌ಎಲ್‌ಆರ್ 2 ಕೋಟ್‌ಗಳನ್ನು ಹೊಂದಿರು ತ್ತದೆ ಎಂದು ಕೊಂಕಣ ರೈಲ್ವೆ ನಿಗಮದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News