ಕಲ್ಯಾಣಪುರ ಗ್ರಾಪಂ ವ್ಯಾಪ್ತಿಯಲ್ಲಿ ಕೋವಿಡ್ ಜಾಗೃತಿ ಕಾರ್ಯಕ್ರಮ

Update: 2020-10-24 14:40 GMT

ಕಲ್ಯಾಣಪುರ, ಅ.24: ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ನೇತೃತ್ವದಲ್ಲಿ ನ್ಯಾಯಾಲಯ ಆವರಣದಲ್ಲಿ ಇತ್ತೀಚೆಗೆ ಉದ್ಘಾಟನೆ ಗೊಂಡ ಕೋವಿಡ್-19 ತಡೆಗಟ್ಟುವಿಕೆ ಮತ್ತು ಜಾಗೃತಿ ಮಾಹಿತಿ ನೀಡುವ ಪ್ರಚಾರ ವಾಹನಕ್ಕೆ ಕಲ್ಯಾಣಪುರ ಗ್ರಾಮಪಂಚಾಯತ್ ಆವರಣದಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಯೋಗಿತಾ ಸ್ವಾಗತಿಸಿದರು.

ಕಲ್ಯಾಣಪುರ ಗ್ರಾಪಂ ಮಾಜಿ ಉಪಾಧ್ಯಕ್ಷರಾಗಿರುವ ಬ್ಯಾಪ್ಟಿಸ್ಟ್ ಡಾಯಸ್ ಪ್ರಚಾರ ವಾಹನಕ್ಕೆ ಹೂಮಾಲೆ ಹಾಕಿ ಸಾಂಕೇತಿಕವಾಗಿ ಸ್ವಾಗತಿಸಿ ದರು. ಕೋವಿಡ್-19ರ ಬಗ್ಗೆ ಜಾಗೃತಿ ಮೂಡಿಸುವ ಜವಾಬ್ದಾರಿ ಹೊತ್ತಿರುವ ಸಂಪನ್ಮೂಲ ವ್ಯಕ್ತಿ ಜೋಸೆಫ್ ರೆಬೆಲ್ಲೊ, ಸೋಂಕಿನ ಕುರಿತು ಮಾಹಿತಿಗಳನ್ನು ನೀಡಿದರು.

ಕೊರೋನ ಸೋಂಕು ನಿಯಂತ್ರಣಕ್ಕೆ ಅನುಸರಿಸಬೇಕಾಗಿರುವ ಮುಂಜ್ರಾತಾ ಕ್ರಮಗಳು, ಇದಕ್ಕಾಗಿ ಸರಕಾರ ನೀಡಿರುವ ಮಾರ್ಗಸೂಚಿಗಳ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡಿದರು. ಮಾಸ್ಕ್‌ನ ಕಡ್ಡಾಯ ಧಾರಣೆ, ಸುರಕ್ಷತಾ ಅಂತರದ ಪಾಲನೆ ಹಾಗೂ ಸ್ಯಾನಟೈಸರ್ ಬಳಕೆ ಕುರಿತಂತೆ ಅವರು ಜನರಲ್ಲಿ ಜಾಗೃತಿ ಮೂಡಿಸಿದರು. ಅಲ್ಲದೇ ಪಂಚಾಯತ್ ವತಿಯಿಂದ ನೀಡಲಾದ ಮಾಸ್ಕ್‌ಗಳನ್ನು ಅವರು ವಿತರಿಸಿದರು.

ಕಾರ್ಯದರ್ಶಿ ಸೀತಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಗ್ರಾಪಂ ಪಿಡಿಓ ಯೋಗಿತಾರ ಕೋರಿಕೆಯ ಮೇರೆಗೆ ಕಾರ್ಯದರ್ಶಿ ಸೀತಾ, ಮಲ್ಪೆ ಪೊಲೀಸ್ ಠಾಣಾ ಎಎಸ್‌ಐ ಜನಾರ್ದನ್ ಹಾಗೂ ಸಿಬ್ಬಂದಿ ರವಿರಾಜ್ ಅವರೊಂದಿಗೆ ತಂಡವಾಗಿ ಗ್ರಾಮ ವ್ಯಾಪ್ತಿಯಲ್ಲಿ ಸಾರ್ವಜನಿಕವಾಗಿ ಮಾಸ್ಕ್ ಧರಿಸದೇ ತಿರುಗುವವರಿಗೆ ದಂಡ ಹಾಕಲಾಯಿತಲ್ಲದೇ, ಹಲವರಿಗೆ ಉಚಿತ ಮಾಸ್ಕ್ ‌ಗಳನ್ನು ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News