ಯುಪಿಎಸ್ಸಿ : ಮಂಗಳೂರಿನ ಮೂವರ ಸಾಧನೆ

Update: 2020-10-24 16:02 GMT

ಮಂಗಳೂರು, ಅ.24: ಕೇಂದ್ರ ನಾಗರಿಕ ಸೇವಾ ಆಯೋಗವು (ಯುಪಿಎಸ್ಸಿ) ನಡೆಸಿದ ಸಿವಿಲ್ ಸರ್ವಿಸ್ ಪೂರ್ವಭಾವಿ ಪರೀಕ್ಷೆಯಲ್ಲಿ ‘ಏಸ್ ಐಎಎಸ್’ ಸಂಸ್ಥೆಯ ಮೂವರು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಇವರು ಮುಂದಿನ ಜನವರಿ ತಿಂಗಳಲ್ಲಿ ನಡೆಯಲಿರುವ ಮುಖ್ಯ ಪರೀಕ್ಷೆಯನ್ನು ಬರೆಯುವ ಅರ್ಹತೆ ಪಡೆದಿದ್ದಾರೆ. ಕರ್ನಾಟಕ ಹಾಗೂ ಕೇರಳ ಲೋಕಸೇವಾ ಆಯೋಗವು ನಡೆಸಿದ ರಾಜ್ಯ ನಾಗರಿಕ ಸೇವಾ ಪೂರ್ವಭಾವಿ ಪರೀಕ್ಷೆಯಲ್ಲಿ ಸಂಸ್ಥೆಯ ಐವರು ವಿದ್ಯಾರ್ಥಿಗಳು ತೇರ್ಗಡೆ ಯಾಗಿದ್ದಾರೆ.

ಸಂಸ್ಥೆಯು ನಗರದ ಫಳ್ನೀರ್‌ನಲ್ಲಿದ್ದ ತನ್ನ ಕಚೇರಿಯನ್ನು ಎಂ.ಜಿ. ರಸ್ತೆಯಲ್ಲಿನ ಎಂಪಾಯರ್ ಮಾಲ್ ಎದುರಿನ ಗೋಲ್ಡನ್ ಆರ್ಕೆಡ್ 2ನೇ ಮಹಡಿಗೆ ಸ್ಥಳಾಂತರಿಸಲಾಗಿದೆ. ಸುಸಜ್ಜಿತ ತರಗತಿಗಳನ್ನು ವ್ಯವಸ್ಥೆಗೊಳಿಸಲಾಗಿದೆ. ನವೆಂಬರ್ ತಿಂಗಳಿಂದ ಹೊಸ ಐಎಎಸ್ ಮತ್ತು ಕೆಎಎಸ್ ತರಗತಿಗಳು ಆರಂಭವಾಗಲಿವೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News