ಶ್ರಿನಿವಾಸ್ ವಿವಿ ಫಿಸಿಯೋಥೆರಪಿ ಕಾಲೇಜಿಗೆ ಎರಡು ನೂತನ ಯಂತ್ರಗಳ ಅಳವಡಿಕೆ

Update: 2020-10-24 16:12 GMT

ಮಂಗಳೂರು, ಅ.24: ನಗರದ ಪಾಂಡೇಶ್ವರದಲ್ಲಿರುವ ಶ್ರೀನಿವಾಸ ವಿಶ್ವವಿದ್ಯಾನಿಲಯದ ಕಾಲೇಜ್ ಆಫ್ ಫಿಸಿಯೋಥೆರಪಿಯ ಹೊರ ರೋಗಿ ವಿಭಾಗದಲ್ಲಿ ಅಳವಡಿಸಲಾದ ಹೊಸ ತಂತ್ರಜ್ಞಾನವನ್ನು ಒಳಗೊಂಡ ‘ಟೆಕ್ ಲೇಸರ್ ಎಸ್ಸ್ 2000 ಮತ್ತು ವೇವ್‌ಸ್ಟಾರ್’ ಎಂಬ ಎರಡು ಯಂತ್ರ ಗಳನ್ನು ಉಡುಪಿಯ ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮಿಜಿ ಉದ್ಘಾಟಿಸಿದರು.

ಈ ಸಂದರ್ಭ ಶ್ರೀನಿವಾಸ್ ವಿಶ್ವವಿದ್ಯಾನಿಲಯದ ಕುಲಾಧಿಪತಿ ಸಿಎ. ಎ. ರಾಘವೇಂದ್ರ ರಾವ್, ಸಹ ಕುಲಾಧಿಪತಿ, ಡಾ ಎ. ಶ್ರೀನಿವಾಸ್ ರಾವ್, ಕುಲಪತಿ ಡಾ. ಪಿ. ಎಸ್. ಐತಾಳ್, ಕುಲಸಚಿವರು ಹಾಗೂ ಆಡಳಿತ ಮಂಡಳಿಯ ಟ್ರಸ್ಟಿ ಸದಸ್ಯರುಗಳಾದ ವಿಜಯಲಕ್ಷ್ಮಿ ಆರ್. ರಾವ್, ಪ್ರೊ. ಎ. ಮಿತ್ರಾ ಎಸ್. ರಾವ್, ಕುಲಸಚಿವ ಆದಿತ್ಯ ಕುಮಾರ್ (ಶೈಕ್ಷಣಿಕ ಮತ್ತು ಅಭಿವೃದ್ಧಿ) ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News