ಮಂಗಳೂರು: ಹೋಮ್‌ಶಾಪ್ -ಮ್ಯಾಟ್‌ಶಾಪ್ ವಿಶೇಷ ಮಾರಾಟ

Update: 2020-10-24 16:16 GMT

ಮಂಗಳೂರು, ಅ. 24: ನಗರದ ಹೃದಯಭಾಗದಲ್ಲಿ ಕಳೆದ 22 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ‘ದಿ ಮ್ಯಾಟ್ ಶಾಪ್’ ಹಾಗೂ ’ಹೋಮ್ ಶಾಪ್’ನಲ್ಲಿ ಅ. 19 ರಿಂದ ನ. 7ರ ವರೆಗೆ ವಿಶೇಷ ಮಾರಾಟವನ್ನು ಹಮ್ಮಿಕೊಳ್ಳಲಾಗಿದೆ.

ನೆಲಹಾಸು ಹಾಗೂ ಕಾರ್ಪೆಟ್‌ಗಳಿಗೆ ತನ್ನದೇ ಛಾಪನ್ನು ಕರಾವಳಿಯ ಗ್ರಾಹಕರಲ್ಲಿ ಮೂಡಿಸಿರುವ ‘ದಿ ಮ್ಯಾಟ್‌ಶಾಪ್’ನಲ್ಲಿ ಉತ್ತಮ ಗುಣ ಮಟ್ಟದ ಡೋರ್ ಮ್ಯಾಟ್ಸ್, ಕಾರ್ಪೆಟ್ಸ್, ಫ್ಲೋರಿಂಗ್, ಯೋಗ ಮ್ಯಾಟ್ಸ್‌ಗಳು ಹಾಗೂ ವಿಶ್ವ ವಿಖ್ಯಾತ ಬ್ರಾಂಡ್ಸ್‌ಗಳಾದ ಒಬ್ಶೆಶನ್ಸ್, ಮೈಹೋಮ್, ಟಾಪ್‌ಫ್ಲೋರ್, ಡ್ಯುರೊ ಕಂಪೆನಿಯ ಆಕರ್ಷಕ ನೆಲಹಾಸುಗಳು ಲಭ್ಯವಿದೆ.

ಮನೆಯ ಅಲಂಕಾರದ ಕರ್ಟನ್ಸ್, ಬ್ಲೈಂಡ್ಸ್, ವಾಲ್ ಪೇಪರ್ಸ್‌, ಬೆಡ್ಡಿಂಗ್ ಸೆಟ್ಸ್, ಬೆಡ್‌ಶೀಟ್‌ಗಳು, ಟವಲ್, ಟೇಬಲ್ ಕವರ್ಸ್‌ ಹೋಮ್ ಶಾಪ್ ಸೇಲ್ ಮಾರಾಟದ ವಿಶೇಷತೆಯಾಗಿದೆ. ಡಿ.ಡೆಕೋರ್, ಡಿ.ಸಿ.ಟೆಕ್ಸ್, ಸ್ಪೇಸಸ್, ಲೆ-ರೆವ್, ಕೆ.ಸಿ.ಫ್ಯಾಬ್ರಿಕ್ಸ್, ಮೈಹೋಮ್ ಮತ್ತು ಜೆ.ಎಮ್.ಟಿ. ಮಿಲ್ಸ್ ಕಂಪೆನಿಯ ಉತ್ತಮ ಗುಣಮಟ್ಟದ ಮನೆಯ ಅಲಂಕಾರದ ಸಾಮಾಗ್ರಿಗಳು ಹಲವಾರು ಆಕರ್ಷಕ ವಿನ್ಯಾಸಗಳಲ್ಲಿ ಲಭ್ಯವಿದೆ.

ಕಿಂಗ್ ಕಾಯ್ಲ ಹಾಗೂ ರೆಸ್ಟೋಲೆಕ್ಸ್ ಕಂಪೆನಿಯ ಮ್ಯಾಟ್ರೆಸ್‌ಗಳ ಮೇಲೂ ದರ ಕಡಿತದೊಂದಿಗೆ ಆಕರ್ಷಕ ಬಹುಮಾನಗಳು ಲಭ್ಯವಿದೆ. ಶೇ.25 ವರೆಗಿನ ದರಕಡಿತವಿದೆ. ವಿವಿಧ ಕೊಡುಗೆಗಳು ಮತ್ತು ಸ್ಪೆಸಸ್ ಸಾಮಾಗ್ರಿಗಳ 2,000 ರೂ. ವರೆಗಿನ ಖರೀದಿಯ ಮೇಲೆ 700 ರೂ. ಮೌಲ್ಯದ ಬಾತ್ ಟವಲ್ ಉಚಿತ ಸಿಗಲಿದೆ.

ಬಲ್ಮಠ ರಸ್ತೆಯಲ್ಲಿರುವ ಹೊಟೇಲ್ ಗೋಲ್ಡ್ ಫಿಂಚ್ ಕಾಂಪ್ಲೆಕ್ಸ್‌ನಲ್ಲಿರುವ ದಿ ಮ್ಯಾಟ್ ಶಾಪ್ ಹಾಗೂ ಹೋಮ್ ಶಾಪ್ ರವಿವಾರ ಸಹಿತ ಮಳಿಗೆಯು ಬೆಳಗ್ಗೆ 9ರಿಂದ ರಾತ್ರಿ 8ರವರೆಗೆ ತೆರೆದಿರುತ್ತದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News