ಸುಳ್ಳಿನ ಆಧಾರದಲ್ಲಿ ಅಸ್ತಿತ್ವಕ್ಕೆ ಬಂದ ಕೇಂದ್ರ, ರಾಜ್ಯ ಸರ್ಕಾರ ಜನರ ವಿಶ್ವಾಸ ಕಳೆದುಕೊಳ್ಳುತ್ತಿವೆ : ಎಚ್.ಕೆ.ಪಾಟೀಲ

Update: 2020-10-24 17:17 GMT

ಭಟ್ಕಳ : ದುಷ್ಟಾಲೋಚನೆಯೊಂದಿಗೆ ಅಧಿಕಾರಿಕ್ಕೆ ಬಂದಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರ ವಿಶ್ವಾಸ ಕಳೆದುಕೊಂಡಿವೆ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ಹೇಳಿದರು.

ಅವರು ಶನಿವಾರ ಇಲ್ಲಿನ ಹೊಟೇಲ್‍ವೊಂದರಲ್ಲಿ  ಪಶ್ಚಿಮ ಪದವಿಧರ ಕೇತ್ರದ ಕಾಂಗ್ರೇಸ್ ಅಭ್ಯರ್ಥಿ ಡಾ.ಕುಬೇರಪ್ಪ ಪರ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಅ. 28ರಂದು ನಡೆಯುವ ಪಶ್ಚಿಮ ಪದವಿಧರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿಕೊಂಡ ಅವರು, ಈ ಕ್ಷೇತ್ರ ತಮ್ಮ ರಾಜಕೀಯ ಭವಿಷ್ಯವನ್ನೇ ಬದಲಾಯಿಸಿದೆ. ಇದರ ಋಣ ತೀರಿಸಲು ಸಾಧ್ಯವಿಲ್ಲ. ಕಳೆದ 12 ವರ್ಷಗಳಿಂದ ನಮ್ಮಿಂದ ದೂರವಾಗಿದ್ದ ಈ ಕ್ಷೇತ್ರ ಈಗ ಮತ್ತೆ ನಮಗೆ ಒಲಿಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜ್ಞಾವಂತ ಪದವಿಧರ ಮತದಾರ ಈಗ ಶೋಷಣೆಯ ವಿರುದ್ಧ ದ್ವನಿ ಎತ್ತಲಿದ್ದಾನೆ. ಈ ಚುನಾವಣೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಪತನಕ್ಕೆ ಕಾರಣವಾಗಲಿದೆ ಎಂದ ಅವರು, ಮೋದಿಜಿಯವರ ಸುಳ್ಳು ಈಗ ಅವರಿಗೆ ಮುಳುವಾಗಲಿದೆ ದೇಶದ ಜನರಿಗೆ ಸುಳ್ಳು ಹೇಳುವುದರ ಮೂಲಕ ಇಲ್ಲಿಯ ತನಕ ವಂಚಿಸುತ್ತ ಬಂದಿದ್ದು ಎಲ್ಲವನ್ನೂ ಜನರು ನೆನಪಿಟ್ಟುಕೊಂಡಿದ್ದಾರೆ ಎಂದರು. 

ಈ ಚುನಾವಣೆಯಿಂದ ವಾತಾವರಣ ಬದಲಾಗುತ್ತಿದೆ. ಹಿಂದಿನ ಚುನಾವಣೆಗೆ ಹೋಲಿಸಿದರೇ, ಬಿಜೆಪಿ ಜನರ ಮನಸ್ಸಿಗೆ ಘಾಸಿಯಾಗುವ ರೀತಿಯಲ್ಲಿ ಆಡಳಿತ ನಡೆಸಿದೆ. ಕೃಷಿ ವಿರೋಧಿ ಕಾನೂನನ್ನು ಪಾಸ್ ಮಾಡುವ ಸಲುವಾಗಿ ಸಂವಿಧಾನಾತ್ಮಕ ಮೌಲ್ಯಗಳನ್ನ ಧಿಕ್ಕರಿಸಿ, ರಾಷ್ಟ್ರದ ಸಂಸದೀಯ ವ್ಯವಸ್ಥೆ ಗೆ ಅಪಮಾನ ಮಾಡಿದ್ದಾರೆಂದು ಆಪಾದಿಸಿದ ಎಚ್ ಕೆ ಪಾಟೀಲ್,  ಸ್ವಿಝರ್ಲ್ಯಾಂಡ್ ನಿಂದ ಬ್ಲಾಕ್ ಮನಿ ತರ್ತೇವೆ. ಅದನ್ನ ನಿಮ್ಮ ಅಕೌಂಟ್ ಗೆ ಹಾಕ್ತೀವಿ ಅಂತ ಬಡವರಿಗೆ ಹೇಳಿದ್ರು. ಆದರೆ ಇದುವರೆಗೆ ಭರವಸೆ  ಈಡೇರಿಲ್ಲ ಎಂದರು.

ಬಿಜೆಪಿ ಆಡಳಿತದಲ್ಲಿ ಯುವಕರು ಭೃಮ ನಿರಸನವಾಗಿದ್ದಾರೆ. ಕುಬೇರಪ್ಪನವರು ಹೋರಾಟಗಾರರು. ಹೀಗಾಗಿ ಅವರನ್ನ ಆಯ್ಕೆ ಮಾಡಿ. ಕುಬೇರಪ್ಪನವರಿಗೆ ವೋಟ್ ಮಾಡಿದರೇ, ತಮಗೆ, ಆರ್ ವಿ ದೇಶಪಾಂಡೆ ಅವರಿಗೆ ಬಲ ನೀಡಿದಂತಾಗಿದೆ ಎಂದು ಪಾಟೀಲ್ ಹೇಳಿದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ, ಮಾಜಿ ಶಾಸಕ ಮಾಂಕಾಳ್ ವೈದ್ಯ, ತಂಝೀಮ್ ಅಧ್ಯಕ್ಷ ಪರ್ವೇಝ್ ಕಾಶಿಮಜಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸಂತೋಷ್ ನಾಯ್ಕ, ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಅಬ್ದುಲ್ ಮಜೀದ್, ಜಿ.ಪಂ. ಅಧ್ಯಕ್ಷೆ ಜಯಶ್ರೀ ಮೊಗೇರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News