ಬುಲಂದ್‌ಶಹರ್‌ನಲ್ಲಿ ತನ್ನ ಬೆಂಗಾವಲು ವಾಹನದ ಮೇಲೆ ಗುಂಡು ಹಾರಿಸಲಾಗಿದೆ: ಭೀಮ್ ಆರ್ಮಿ ಮುಖ್ಯಸ್ಥ ಆಝಾದ್ ಆರೋಪ

Update: 2020-10-25 17:03 GMT

ಹೊಸದಿಲ್ಲಿ:ಉತ್ತರಪ್ರದೇಶದ ಬುಲಂದ್‌ಶಹರ್‌ನಲ್ಲಿ ಮುಂಬರುವ ಚುನಾವಣೆಗೆ ಪ್ರಚಾರ ನಡೆಸುತ್ತಿರುವ ವೇಳೆ ತನ್ನ ಬೆಂಗಾವಲು ವಾಹನಗಳ ಮೇಲೆ ಗುಂಡು ಹಾರಿಸಲಾಗಿದೆ ಎಂದು ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ ಆಝಾದ್ ರವಿವಾರ ಆರೋಪಿಸಿದ್ದಾರೆ.

ಬುಲಂದ್‌ಶಹರ್‌ನಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ನಮ್ಮ ನಿರ್ಧಾರವು ವಿರೋಧ ಪಕ್ಷಗಳಿಗೆ ತೊಂದರೆಯಾಗಿದ್ದು, ಇಂದಿನ ರ್ಯಾಲಿಯು ಅವರ ನಿದ್ದೆಯನ್ನು ಕೆಡಿಸಿದೆ. ಅವರು ನಮ್ಮ ಬೆಂಗಾವಲು ಪಡೆಯ ಮೇಲೆ ಗುಂಡು ಹಾರಿಸಿದ್ದಾರೆೆ ಎಂದು ಆಝಾದ್ ಟ್ವೀಟಿಸಿದ್ದಾರೆ.

ಈ ಘಟನೆಯು ಎದುರಾಳಿ ಪಕ್ಷಗಳು ಚುನಾವಣೆಯಲ್ಲಿ ಸೋಲಿನ ಭೀತಿಯಲ್ಲಿದೆ ಹಾಗೂ ವಾತಾವರಣವನ್ನು ಕೆಡಿಸಲು ಪ್ರಯತ್ನಿಸುತ್ತಿದೆ ಎಂದು ತೋರಿಸುತ್ತದೆ ಎಂದು ಆಝಾದ್ ಹೇಳಿದ್ದಾರೆ.

ಬುಲಂದ್‌ಶಹರ್ ಜಿಲ್ಲೆಯ ಸದರ್ ಕ್ಷೇತ್ರದಲ್ಲಿ ಬಿಜೆಪಿ, ಆರ್‌ಎಲ್‌ಡಿ, ಕಾಂಗ್ರೆಸ್ ಹಾಗೂ ಭೀಮ್ ಆರ್ಮಿ ನಡುವೆ ಚತುಷ್ಕೋನ ಸ್ಪರ್ಧೆಗೆ ಸಾಕ್ಷಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News