ಟಿವಿ ನೇರ ಪ್ರಸಾರದಲ್ಲಿದ್ದ ವರದಿಗಾರನ ಫೋನ್ ಸೆಳೆದುಕೊಂಡು ಓಟಕ್ಕಿತ್ತ ವ್ಯಕ್ತಿ!

Update: 2020-10-26 08:49 GMT

ಹೊಸದಿಲ್ಲಿ: ಅರ್ಜೆಂಟೀನದ ಟಿವಿ ವರದಿಗಾರನೊಬ್ಬ ಟಿವಿ ನೇರ ಪ್ರಸಾರದಲ್ಲಿ ಭಾಗವಹಿಸಲು ಕೆಲವೇ ನಿಮಿಷಗಳಿರುವಾಗ ಅಪರಿಚಿತ ವ್ಯಕ್ತಿಯೊಬ್ಬ ವರದಿಗಾರನ ಫೋನ್ ಕಸಿದುಕೊಂಡು ಓಡಿಹೋದ ಘಟನೆ ನಡೆದಿದೆ.
ಅರ್ಜೆಂಟಿನ ಸುದ್ದಿಕೇಂದ್ರವಾದ ಎನ್ ವಿವೊ ಎಲ್ ನ್ಯೂಯೆವ್ ವರದಿಗಾರ ಡಿಯಾಗೊ ಡೆಮಾರ್ಕೊ ಬ್ಯೂನಸ್‌ನಿಂದ ನೇರ ಪ್ರಸಾರ ಮಾಡಲು ತಯಾರಿ ನಡೆಸುತ್ತಿದ್ದಾಗ ವ್ಯಕ್ತಿಯೊಬ್ಬ ವರದಿಗಾರನ ಫೋನ್ ಸೆಳದು ಓಡಿ ಹೋದ. ಇಡೀ ಘಟನೆಯು ಲೈವ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ವೀಡಿಯೊ ಈಗ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಅಕ್ಟೋಬರ್ 20ರಂದು ಈ ತುಣುಕನ್ನು ಚಿತ್ರೀಕರಿಸಲಾಗಿದೆ.

ಡೆಮಾರ್ಕೊ ತನ್ನ ಮಾಸ್ಕನ್ನು ಸರಿಪಡಿಸಿಕೊಳ್ಳುತ್ತಾ ನೇರ ಪ್ರಸಾರಕ್ಕೆ ತಯಾರಿ ಮಾಡುತ್ತಿದ್ದ ವೇಳೆ ಆ ವ್ಯಕ್ತಿ ಫೋನ್ ಕಸಿದುಕೊಂಡು ಓಡಿ ಹೋಗಿದ್ದಾನೆ ಎಂದು ಡೈಲಿ ಮೇಲ್ ವರದಿ ಮಾಡಿದೆ. ಫೋನ್ ಕಸಿದುಕೊಂಡು ಓಡಿದ ವ್ಯಕ್ತಿಯ ಬೆನ್ನಟ್ಟಿಕೊಂಡು ದಾರಿಹೋಕರು ಹಾಗೂ ಮಕ್ಕಳು ಹೋದರು. ಫೋನ್ ಕಳ್ಳನ ಹಿಂದೆ ಓಡಿದ ಸ್ಥಳೀಯರು ಆತನನ್ನು ಹಿಡಿದು ಡೆಮಾರ್ಕೊಗೆ ಫೋನ್ ಹಿಂತಿರುಗಿಸಲು ನೆರವಾದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News