ಲಡಾಕ್-ಲೇಹ್ ಕೌನ್ಸಿಲ್ ಚುನಾವಣೆ: ಬಿಜೆಪಿ 12, ಕಾಂಗ್ರೆಸ್ 6ರಲ್ಲಿ ಜಯ

Update: 2020-10-26 16:57 GMT

ಲೇಹ್, ಅ.26: ಲಡಾಕ್ ಸ್ವಾಯತ್ತ ಪ್ರದೇಶ ಅಭಿವೃದ್ಧಿ ಸಮಿತಿ(ಎಲ್‌ಎಎಚ್‌ಡಿಸಿ)ಗೆ ನಡೆದ ಚುನಾವಣೆಯಲ್ಲಿ ಸೋಮವಾರ ಮಧ್ಯಾಹ್ನದವರೆಗಿನ ಮಾಹಿತಿಯಂತೆ ಬಿಜೆಪಿ 12, ಕಾಂಗ್ರೆಸ್ 6 ಮತ್ತು ಪಕ್ಷೇತರರು 2 ಸ್ಥಾನಗಳಲ್ಲಿ ಜಯ ಪಡೆದಿರುವುದಾಗಿ ವರದಿಯಾಗಿದೆ. ಉಳಿದ 6 ಸಮಿತಿಗೆ ನಡೆದ ಚುನಾವಣೆಯ ಫಲಿತಾಂಶವನ್ನು ಇನ್ನಷ್ಟೇ ಪ್ರಕಟಿಸಬೇಕಿದೆ.

ಆಮ್ ಆದ್ಮಿ ಪಕ್ಷ ಲಡಾಕ್ ‌ನಲ್ಲಿ ತನ್ನ ಖಾತೆಯನ್ನು ಆರಂಭಿಸುವ ವಿಶ್ವಾಸದಲ್ಲಿದೆ. ಮುಸ್ಲಿಂ ಸಮುದಾಯದವರು ಗಣನೀಯ ಪ್ರಮಾಣದಲ್ಲಿರುವ ನುಬ್ರಾ ಕಣಿವೆ ಪ್ರದೇಶದ ಎಲ್ಲಾ 5 ಸ್ಥಾನಗಳಲ್ಲೂ ಬಿಜೆಪಿ ಗೆಲುವು ಸಾಧಿಸಿರುವುದು ವಿಶೇಷವಾಗಿದೆ. 30 ಸದಸ್ಯ ಬಲದ ಸಮಿತಿಯಲ್ಲಿ 4 ಸದಸ್ಯರನ್ನು ನಾಮನಿರ್ದೇಶನಗೊಳಿಸಿದ್ದರೆ, ಉಳಿದ 26 ಸ್ಥಾನಗಳಿಗೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಆಮ್ ಆದ್ಮಿ ಪಕ್ಷ 19 ಸ್ಥಾನಗಳಲ್ಲಿ ಸ್ಪರ್ಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News