ಎಚ್‌ಆರ್ ಆಸ್ಪತ್ರೆಯ ವೈದ್ಯರ ವೇತನ ಕೂಡಲೇ ಪಾವತಿಸಿ: ಐಎಂಎ ಆಗ್ರಹ

Update: 2020-10-26 16:44 GMT

 ಹೊಸದಿಲ್ಲಿ, ಅ. 26 : ಹಿಂದೂ ರಾವ್ ಆಸ್ಪತ್ರೆಯ ವೈದ್ಯರ ಬಾಕಿ ವೇತನವನ್ನು ಕೂಡಲೇ ಪಾವತಿಸುವಂತೆ ಭಾರತೀಯ ವೈದ್ಯಕೀಯ ಸಂಘಟನೆ (ಐಎಂಎ)ಸೋಮವಾರ ಉತ್ತರ ದಿಲ್ಲಿ ಮುನ್ಸಿಪಲ್ ಕಾರ್ಪೋರೇಶನ್‌ನಲ್ಲಿ ಆಗ್ರಹಿಸಿದೆ.

ಹಿಂದೂ ರಾವ್ ಆಸ್ಪತ್ರೆಯ ವೈದ್ಯರಿಗೆ ಕಳೆದ ಮೂರು ತಿಂಗಳಿಂದ ವೇತನ ಪಾವತಿಸದೇ ಇರುವುದು ದುರಾದೃಷ್ಟಕರ ಎಂದು ಅದು ಹೇಳಿದೆ. ವೇತನ ಪಾವತಿ ಬಾಕಿ ಇರುವ ಹಿನ್ನೆಲೆಯಲ್ಲಿ ಉತ್ತರ ದಿಲ್ಲಿಯ ಮುನ್ಸಿಪಲ್ ಕಾರ್ಪೋರೇಶನ್ ನಡೆಸುತ್ತಿರುವ ಆಸ್ಪತ್ರೆಗಳ ಹಿರಿಯ ವೈದ್ಯರು ಸೋಮವಾರ ಒಂದು ದಿನ ಸಾಮೂಹಿಕ ರಜೆ ಮಾಡಿದ್ದಾರೆ. ‘ಬನಾನ ರಿಪಬ್ಲಿಕ್’ ಎಂಬ ಶೀರ್ಷಿಕೆಯಲ್ಲಿ ಹೇಳಿಕೆ ಬಿಡುಗಡೆ ಮಾಡಿದ ಭಾರತೀಯ ವೈದ್ಯಕೀಯ ಸಂಘಟನೆ, ವೈದ್ಯರು ರಾಷ್ಟ್ರದ ಸೊತ್ತು. ಕಾನೂನು ಬದ್ದ ವೇತನ ನಿರಾಕರಿಸುವ ಮೂಲಕ ಮಾಡುವ ಅವಮಾನ ಆಡಳಿತ ಪ್ರಾಯೋಜಿತ ಹಿಂಸೆ ಹೊರತು ಬೇರೇನೂ ಅಲ್ಲ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News