ನ. 30ರವರೆಗೆ ಅಂತಾರಾಷ್ಟ್ರೀಯ ಪ್ರಯಾಣಿಕ ವಿಮಾನಗಳಿಗೆ ನಿರ್ಬಂಧ ಮುಂದುವರಿಕೆ

Update: 2020-10-28 13:12 GMT

ಹೊಸದಿಲ್ಲಿ : ಕೋವಿಡ್ ಭೀತಿಯ ಹಿನ್ನೆಲೆಯಲ್ಲಿ ಎಲ್ಲಾ ನಿಗದಿತ ಅಂತಾರಾಷ್ಟ್ರೀಯ  ಪ್ರಯಾಣಿಕ ವಿಮಾನ ಸೇವೆಗಳ ಮೇಲಿನ ನಿರ್ಬಂಧವನ್ನು ನವೆಂಬರ್ 30ರವರೆಗೆ ವಿಸ್ತರಿಸಲಾಗಿದೆ ಎಂದು ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಇಂದು ಹೇಳಿದೆ.

''ಆದರೆ ಕೆಲವೊಂದು ಆಯ್ದ ಮಾರ್ಗಗಳಲ್ಲಿ  ಆಯಾಯ ಪ್ರಕರಣವನ್ನು ಆಧರಿಸಿ ಸಂಬಂಧಿತ ಪ್ರಾಧಿಕಾರಗಳು ಅಂತಾರಾಷ್ಟ್ರೀಯ  ವಿಮಾನ ಸೇವೆಗಳಿಗೆ ಅನುಮತಿ ನೀಡಬಹುದಾಗಿದೆ'' ಎಂದು ಡಿಜಿಸಿಎ ಇಂದು ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಆದರೆ ಯಾವುದೇ ಅಂತಾರಾಷ್ಟ್ರೀಯ ಸರಕು ವಿಮಾನಗಳ ಸಾಗಾಟಕ್ಕೆ ಯಾವುದೇ ನಿರ್ಬಂಧವಿರುವುದಿಲ್ಲ ಎಂದೂ ಡಿಜಿಸಿಎ ತಿಳಿಸಿದೆ. ಭಾರತ ಈಗಾಗಲೇ  ಅಮೆರಿಕಾ, ಇಂಗ್ಲೆಂಡ್, ಸಂಯುಕ್ತ ಅರಬ್ ಸಂಸ್ಥಾನ, ಭೂತಾನ್, ಫ್ರಾನ್ಸ್ ಹಾಗೂ ಕೆನ್ಯಾ ಸೇರಿದಂತೆ  18 ದೇಶಗಳ ಜತೆಗೆ ಏರ್ ಬಬ್ಬಲ್ ಒಪ್ಪಂದಕ್ಕೆ ಸಹಿ ಹಾಕಿದ್ದು, ಇದರನ್ವಯ ಈ ದೇಶಗಳ ನಡುವೆ ವಿಶೇಷ ಅಂತಾರಾಷ್ಟ್ರೀಯ ವಿಮಾನ ಸೇವೆಗಳಿಗೆ ಅನುಮತಿಸಬಹುದಾಗಿದೆ.

ಭಾರತದಲ್ಲಿ ದೇಶೀಯ ವಿಮಾನ ಸೇವೆಗಳನ್ನು ಮೇ 25ರಿಂದ ಹಂತಹಂತವಾಗಿ  ಮರು ಆರಂಭಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News