ಬಿಹಾರ: ಬಿಜೆಪಿಯ ಚಿಹ್ನೆ ಹೊಂದಿದ್ದ ಮಾಸ್ಕ್ ಧರಿಸಿ ಮತಗಟ್ಟೆಗೆ ಆಗಮಿಸಿದ ಸಚಿವನ ವಿರುದ್ಧ ಎಫ್‌ಐಆರ್

Update: 2020-10-28 13:07 GMT

ಪಾಟ್ನಾ, ಅ.28: ಬಿಹಾರ ವಿಧಾನಸಭಾ ಚುನಾವಣೆಯ ಪ್ರಥಮ ಹಂತದ ಮತದಾನದ ಸಂದರ್ಭ ರಾಜ್ಯದ ಸಚಿವ, ಗಯಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರೇಮ್ ಕುಮಾರ್ ಕಮಲದ ಚಿಹ್ನೆ ಇರುವ ಮಾಸ್ಕ್ ಧರಿಸಿ ಮತ ಚಲಾಯಿಸಲು ಆಗಮಿಸಿದ್ದ ಹಿನ್ನೆಲೆಯಲ್ಲಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. 

ಸೈಕಲ್ ಏರಿ ಮತಗಟ್ಟೆಗೆ ಬಂದು ಮತ ಚಲಾಯಿಸಿದ ಬಿಹಾರದ ಕೃಷಿಸಚಿವ ಪ್ರೇಮ್ ಕುಮಾರ್ ಬಿಜೆಪಿಯ ಚಿಹ್ನೆ ಕಮಲದ ಚಿತ್ರ ಇರುವ ಮಾಸ್ಕ್ ಧರಿಸಿದ್ದರು ಹಾಗೂ ತಮ್ಮ ಗೆಲುವು ಖಚಿತ ಎಂದು ಮತಗಟ್ಟೆಯ ಹೊರಗಿದ್ದ ಬೆಂಬಲಿಗರಲ್ಲಿ ಹೇಳಿದ್ದಾರೆ. ಇದು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಎಚ್ ‌ಆರ್ ಶ್ರೀನಿವಾಸ್ ಹೇಳಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿದ್ದು ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕೆ ಪ್ರಕರಣ ದಾಖಲಿಸಿದ ಜೊತೆಗೆ, ಎಫ್‌ಐಆರ್ ಕೂಡಾ ದಾಖಲಿಸುವಂತೆ ಅವರು ಸೂಚಿಸಿದ್ದಾರೆ. ನೀತಿ ಸಂಹಿತೆ ಉಲ್ಲಂಘಿಸುವ ಉದ್ದೇಶ ತನ್ನದಾಗಿರಲಿಲ್ಲ. ಬಿಜೆಪಿ ಚಿಹ್ನೆ ಇರುವ ಮಾಸ್ಕ್ ಅನ್ನು ಮತದಾನ ಕೇಂದ್ರದೊಳಗೆ ಹೋಗುವಾಗ ತೆಗೆಯಲು ಮರೆತುಬಿಟ್ಟಿದ್ದೆ ಎಂದು ಕುಮಾರ್ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News