ಬಿಹಾರ ಮೊದಲ ಹಂತದ ವಿಧಾನ ಸಭಾ ಚುನಾವಣೆ: ಶೇ. 53.46 ಮತದಾನ

Update: 2020-10-28 18:07 GMT

 ಪಾಟ್ನಾ, ಅ. 28: ಬಿಹಾರದಲ್ಲಿ ನಡೆದ ಮೊದಲ ಹಂತದ ವಿಧಾನ ಸಭಾ ಚುನಾವಣೆಯಲ್ಲಿ ಸಂಜೆ 6 ಗಂಟೆ ವರೆಗೆ ಶೇ. 53.46 ಮತದಾನವಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.

ಸಂಜೆ 5 ಗಂಟೆ ವರೆಗೆ ಶೇ. 52.24 ಮತದಾನವಾಗಿತ್ತು ಎಂದು ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾ ಬುಧವಾರ ತಿಳಿಸಿದ್ದಾರೆ. ಮೂರು ಹಂತದ ಚುನಾವಣೆಯಲ್ಲಿ ಬುಧವಾರ ಬಿಹಾರದ ಒಟ್ಟು 71 ವಿಧಾನ ಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಚುನಾವಣೆ ಬಿಗಿ ಭದ್ರತೆ ಹಾಗೂ ಕೊರೋನ ಮಾರ್ಗಸೂಚಿಯ ನಡುವೆ ನಡೆಯಿತು. ಮತದಾನ ಬೆಳಗ್ಗೆ 7 ಗಂಟೆಗೆ ಆರಂಭವಾಗಿ ಸಂಜೆ 6 ಗಂಟೆಗೆ ಅಂತ್ಯಗೊಂಡಿತು. ಮತದಾನದಲ್ಲಿ ಸುಮಾರು 2.15 ಕೋಟಿ ಮತದಾರರು ಮತ ಚಲಾಯಿಸಿದರು. ಇವರಲ್ಲಿ 1.12 ಕೋಟಿ ಪುರುಷ ಮತದಾರರು ಹಾಗೂ 1.01 ಕೋಟಿ ಮಹಿಳಾ ಮತದಾರರು. 599 ತೃತೀಯ ಲಿಂಗಿ ಮತದಾರರು ಎಂದು ಚುನಾವಣಾ ಆಯೋಗದ ದತ್ತಾಂಶ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News