ರಾಜ್ಯಸಭಾ ಚುನಾವಣೆ: ಬಿಎಸ್ ಪಿ- ಬಿಜೆಪಿ ಒಳ ಒಪ್ಪಂದ ?

Update: 2020-10-28 18:23 GMT

ಪಾಟ್ನಾ, ಅ. 28: ಉತ್ತರಪ್ರದೇಶದಲಿ ನವೆಂಬರ್ 9ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಬಿಎಸ್‌ಪಿ ಒಳ ಒಪ್ಪಂದ ಮಾಡಿಕೊಂಡಿರುವ ವದಂತಿ ಕೇಳಿ ಬಂದಿದೆ. ರಾಜ್ಯ ಸಭೆಯ ಚುನಾವಣೆಯ 10 ಸ್ಥಾನಗಳಲ್ಲಿ ಓರ್ವ ಅಭ್ಯರ್ಥಿಯನ್ನು ಮಾತ್ರ ಬಿಎಸ್‌ಪಿ ಕಣಕ್ಕಿಳಿಸುತ್ತಿದೆ. ಈ ನಡುವೆ ಉತ್ತರಪ್ರದೇಶದಲ್ಲಿ ಅತ್ಯಧಿಕ ಶಾಸಕರ ಬಲ ಹೊಂದಿರುವ ಬಿಜೆಪಿ 8 ಸ್ಥಾನಗಳಿಗೆ ಸ್ಪರ್ಧಿಸುವುದಾಗಿ ಹೇಳಿದೆ. ಆದರೆ, ಒಂದು ಸ್ಥಾನದಲ್ಲಿ ಸ್ಪರ್ಧಿಸದೇ ಇರಲು ನಿರ್ಧರಿಸಿದೆ.

ಇದು ಬಿಜೆಪಿ, ಬಿಎಸ್‌ಪಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಒಂದು ಸ್ಥಾನವನ್ನು ಮಾಯಾವತಿ ಅವರ ಪಕ್ಷಕ್ಕೆ ಬಿಟ್ಟುಕೊಟ್ಟಿದೆ ಎಂಬ ವಂದಂತಿಗೆ ಕಾರಣವಾಗಿದೆ. ಆದರೆ, ಬಿಎಸ್‌ಪಿ ಹಾಗೂ ಬಿಜೆಪಿ ಈ ವದಂತಿಯನ್ನು ನಿರಾಕರಿಸಿವೆ. ರಾಜ್ಯಸಭಾ ಸ್ಥಾನಕ್ಕೆ ಬಿಜೆಪಿಯೊಂದಿಗೆ ಸ್ಪರ್ಧಿಸುವ ಪಕ್ಷದ ಒಳ ಒಪ್ಪಂದದಿಂದ ಅಸಮಾಧಾನಗೊಂಡು ಆರು ಶಾಸಕರು ಬಿಎಸ್ ಪಿ ತೊರೆಯುವ ಸುಳಿವು ನೀಡಿದ್ದಾರೆ.

 ಶಾಸಕರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಬಿಎಸ್‌ಪಿಯ ನಿಕಟ ಮೂಲಗಳು ತಿಳಿಸಿವೆ. ತಮ್ಮ ಪಕ್ಷ ಬಿಜೆಪಿಯೊಂದಿಗಿನ ಮಾಡಿಕೊಂಡ ಆಂತರಿಕ ಒಪ್ಪಂದದಿಂದ ಅಸಮಾಧಾನಗೊಂಡಿರುವುದಾಗ ನಮ್ಮ ಪಕ್ಷದ ಹೈಕಮಾಂಡ್ ಅನ್ನು ಭೇಟಿಯಾಗಿರುವ ಕೆಲವು ಬಿಎಸ್‌ಪಿ ಶಾಸಕರು ಪ್ರತಿಪಾದಿಸಿದ್ದಾರೆ ಎಂದು ಎಸ್‌ಪಿಯ ಎಂಎಲ್‌ಸಿ ಉದಯವೀರ್ ಸಿಂಗ್ ಪ್ರತಿಪಾದಿಸಿದ್ದಾರೆ. ಬಿಜೆಪಿ ಮೇಲಿನ ಬಿಎಸ್‌ಪಿಯ ಮೃದು ಧೋರಣೆ ಈ ಶಾಸಕರಲ್ಲಿ ಅಸಮಾಧಾನ ಉಂಟು ಮಾಡಿದೆ ಎಂದು ಅವರು ಉದಯಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News