ಮಲ್ಪೆ ಬಂದರಿನಲ್ಲಿ 17 ಮಕ್ಕಳ ರಕ್ಷಣೆ

Update: 2020-10-29 03:53 GMT

ಮಲ್ಪೆ : ಮಕ್ಕಳ ರಕ್ಷಣಾ ಘಟಕ ಹಾಗು ಇತರೆ ಇಲಾಖೆ ಅಧಿಕಾರಿಗಳಿಂದ ಮಲ್ಪೆ ಬಂದರಿನಲ್ಲಿ 17 ಮಕ್ಕಳ ರಕ್ಷಣೆ ಮಾಡಲಾಗಿದೆ. 

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕಾರ್ಮಿಕ ಇಲಾಖೆ, ಸಾರ್ವಜನೀಕ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ಮಕ್ಕಳ ಸಹಾಯವಾಣಿ, ನಾಗರಿಕ ಸೇವಾ ಟ್ರಸ್ಟ್ ಉಡುಪಿ ವತಿಯಿಂದ ಮಲ್ಪೆ ಬಂದರಿಗೆ ದಾಳಿ ನಡೆಸಿ ಮೀನು ಆಯುವ ಬಳ್ಳಾರಿ ಮತ್ತು ಕೊಪ್ಪಳ ಮೂಲದ 17 ಮಕ್ಕಳನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರು ಪಡಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಾಣಾಧಿಕಾರಿ ಸದಾನಂದ ನಾಯಕ್, ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್, ರಕ್ಷಾಣಾಧಿಕಾರಿ ಮಹೇಶ್ ದೇವಾಡಿಗ, ಕಾರ್ಮಿಕ ಅಧಿಕಾರಿ ಕುಮಾರ್, ಕಾರ್ಮಿಕ ನಿರೀಕ್ಷಕ ಪ್ರವೀಣ್, ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕ ನಾಗರಾಜ್, ರಕ್ಷಣಾ ಘಟಕದ ಸಮಾಜ ಕಾರ್ಯಕರ್ತರಾದ ಯೋಗೀಶ್, ಸುರಕ್ಷಾ, ಸುನಂದಾ, ಮಹಿಳಾ ಪೊಲೀಸ್ ಠಾಣೆ ಸಿಬ್ಬಂದಿಗಳಾದ ಸಾವಿತ್ರಿ, ಅರುಣಾ, ಮಲ್ಪೆ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಸವಿತಾ, ಜಗದೀಶ್, ನಿತ್ಯಾನಂದ ಒಳಕಾಡು, ಶಿಲ್ಪಾ, ಸುಶ್ಮಿತಾ, ಮಕ್ಕಳ ಸಹಾಯವಾಣಿಯ ಕಸ್ತೂರಿ, ತ್ರಿವೇಣಿ, ನೇತ್ರ, ವಿಶ್ವಾಸದಮನೆ ಶಂಕರಪುರ ಸಂಸ್ಥೆಯ ಕ್ರಿಸ್ಟೋಪರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News