ಮಿತ್ತಬೈಲ್ ಕೇಂದ್ರ ಜುಮಾ ಮಸೀದಿ ಖಾಝಿಯಾಗಿ ಸೈಯದ್ ಮುಹಮ್ಮದ್ ಜಿಫ್ರಿ ತಂಙಳ್

Update: 2020-10-29 11:05 GMT

ಬಿ.ಸಿ.ರೋಡ್ : ಇಲ್ಲಿಗೆ ಸಮೀಪದ ಮಿತ್ತಬೈಲ್ ಕೇಂದ್ರ ಮೊಹಿಯುದ್ದೀನ್ ಜುಮಾ ಮಸೀದಿಯ ನೂತನ ಖಾಝಿ ಸ್ವೀಕಾರ ಕಾರ್ಯಕ್ರಮವು ನವೆಂಬರ್ ಒಂದರಂದು  ಸಂಜೆ ಮಿತ್ತಬೈಲ್ ಸಮುದಾಯ ಭವನದಲ್ಲಿ ನಡೆಯಲಿದೆ.

ಸಮಸ್ತ ಕೇರಳ ಜಂಇಯತ್ತುಲ್ ಉಲಮಾ ಇದರ  ಅಧ್ಯಕ್ಷರೂ, ದಾರುಲ್ ಹುದಾ ಇಸ್ಲಾಮಿಕ್ ಯನಿವರ್ಸಿಟಿ ಇದರ ಕುಲಪತಿಗಳು, ಸಿ. ಎಂ. ಮಖಾಂ ಆರ್ಟ್ಸ್ ಕಾಲೇಜು ಮತ್ತು ಯಮಾನಿಯ್ಯ  ಅರೆಬಿಕ್ ಕಾಲೇಜು ಇದರ ಪ್ರಾಂಶುಪಾಲರು, ಸುಮಾರು  ಮುನ್ನೂರಕ್ಕೂ ಅಧಿಕ ಮೊಹಲ್ಲಾಗಳ ಸಂಯುಕ್ತ ಖಾಝಿಗಳಾಗಿ ಸೇವೆ ನಿರ್ವಹಿಸುತ್ತಿರುವ ಸಯ್ಯದುಲ್  ಉಲಮಾ ಅಸ್ಸಯ್ಯದ್  ಮುಹಮ್ಮದ್  ಜಿಫ್ರಿ ಮುತ್ತು ಕೋಯಾ ತಂಙಳ್ ಖಾಝಿ ಸ್ಥಾನವನ್ನು ಸ್ವೀಕರಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಸಯ್ಯದ್ ಅಲಿ ತಂಙಳ್ ಕುಂಬೋಳ್, ಸಯ್ಯದ್ ಝೆನುಲ್ ಆಬಿದೀನ್ ತಂಙಳ್ ಕುನ್ನಂಗೈ, ಸಯ್ಯದ್ ಝೆನುಲ್ ಆಬಿದೀನ್ ಜಿಫ್ರಿ ತಂಙಳ್ ಪೊಸೋಟ್, ಸಯ್ಯದ್ ಹುಸೈನ್ ಬಾಅಲವಿ ತಂಙಳ್ ಕುಕ್ಕಾಜೆ, ಪಾತುರ್ ಉಸ್ತಾದ್ ಖಾಝಿ, ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಬಂಬ್ರಾಣ ಉಸ್ತಾದ್, ಶೈಖುನಾ ಬೊಳ್ಳೂರು ಉಸ್ತಾದ್, ಹಾಗೂ ಉಲಮಾ, ಉಮರಾ  ನೇತಾರರು, ಸೂಫಿವರ್ಯರು ಸಾದಾತುಗಳು  ಭಾಗವಹಿಸಲಿದ್ದಾರೆ  ಎಂದು ಮಿತ್ತಬೈಲ್ ಮಸೀದಿ ಆಡಳಿತ ಸಮಿತಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News