ಉಡುಪಿ ನಗರ ಸಭೆ: ನೂತನ ಅಧ್ಯಕ್ಷರಾಗಿ ಸುಮಿತ್ರಾ ನಾಯಕ್, ಉಪಾಧ್ಯಕ್ಷರಾಗಿ ಲಕ್ಷ್ಮೀ ಆಯ್ಕೆ

Update: 2020-10-29 11:50 GMT

ಉಡುಪಿ, ಅ.29: ಉಡುಪಿ ನಗರಸಭೆ ನೂತನ ಅಧ್ಯಕ್ಷರಾಗಿ ಸುಮಿತ್ರಾ ಆರ್.ನಾಯಕ್ ಹಾಗೂ ಉಪಾಧ್ಯಕ್ಷರಾಗಿ ಲಕ್ಷ್ಮೀ ಮೆಂಡನ್ ಆಯ್ಕೆಯಾಗಿದ್ದಾರೆ.

ನಗರ ಸಭೆ ಸದಸ್ಯರಾಗಿ ಚುನಾಯಿತರಾದ ಸುಮಾರು ಎರಡು ವರ್ಷ ಎರಡು ತಿಂಗಳ ಸುಧೀರ್ಘ ಅವಧಿಯ ಬಳಿಕ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿದೆ.

ಈ ಆಯ್ಕೆಯನ್ನು ಕುಂದಾಪುರ ಉಪವಿಭಾಗಾಧಿಕಾರಿ ರಾಜು ನಡೆಸಿಕೊಟ್ಟರು. ನಗರಸಭೆಯ ಒಟ್ಟು 35 ಸದಸ್ಯರಲ್ಲಿ ಬಿಜೆಪಿಯ 31 ಮತ್ತು ಕಾಂಗ್ರೆಸ್‌ನ ನಾಲ್ಕು ಸದಸ್ಯರಿದ್ದಾರೆ. ಪರ್ಕಳ ವಾರ್ಡ್‌ನ ಸುಮಿತ್ರಾ ನಾಯಕ್ ಮೂರು ಬಾರಿ ಸದಸ್ಯರಾಗಿದ್ದರೆ, ಮಲ್ಪೆ ಕೊಳ ವಾರ್ಡ್‌ನ ಲಕ್ಷ್ಮೀ ಮೆಂಡನ್ ಮೊದಲ ಬಾರಿಗೆ ಸದಸ್ಯರಾಗಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷರು, ಎಲ್ಲ ಸಹಕಾರ ದೊಂದಿಗೆ ಉಡುಪಿ ನಗರವನ್ನು ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಮಾಡಲಾಗುವುದು. ಕಸ ವಿಲೇವಾರಿ ಮತ್ತು ದಾರಿದೀಪ ಸಮಸ್ಯೆಯನ್ನು ಸಂಪೂರ್ಣವಾಗಿ ಪರಿಹರಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಉಡುಪಿ ಶಾಸಕ ರಘುಪತಿ ಭಟ್ ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಅಭಿನಂದಿಸಿದರು. ಎಲ್ಲ ಸದಸ್ಯರು ಪ್ರಮಾಣವಚನ ಸ್ವೀಕರಿಸಿದರು. ಎಲ್ಲ ಸದಸ್ಯರನ್ನು ಪೌರಾಯುಕ್ತ ಆನಂದ ಕಲ್ಲೋಲಿಕರ್ ಅಭಿನಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News