ಆರೋಗ್ಯದ ಬಗ್ಗೆ ವೈರಲ್ ಆಗಿರುವ ಪತ್ರ ನಕಲಿ: ರಜನೀಕಾಂತ್

Update: 2020-10-29 15:24 GMT

ಚೆನ್ನೈ, ಅ.29: ತಮಿಳು ನಟ ರಜನೀಕಾಂತ್ ಆರೋಗ್ಯದ ಕುರಿತು ಬುಧವಾರ ಟ್ವಿಟರ್‌ನಲ್ಲಿ ಪತ್ರವೊಂದು ವೈರಲ್ ಆಗಿದೆ. ಕೊರೋನ ಸೋಂಕಿನ ಸಮಸ್ಯೆ ರಜನೀಕಾಂತ್ ಅವರ ರಾಜಕೀಯ ಕ್ಷೇತ್ರದ ಪ್ರವೇಶದ ನಿರ್ಧಾರಕ್ಕೆ ಹಿನ್ನಡೆಯಾಗಿದೆ. ಗರಿಷ್ಠ ಮುನ್ನೆಚ್ಚರಿಕೆ ವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ನಿಮಗೆ 70 ವರ್ಷ ವಯಸ್ಸಾಗಿದೆ. ಅಲ್ಲದೆ ಕಿಡ್ನಿ ಕಸಿಗೆ ಒಳಗಾಗಿರುವುದರಿಂದ, ಕೊರೋನ ಲಸಿಕೆ ಲಭ್ಯವಾದರೂ, ಈ ಹಿಂದಿನಂತೆ ಮುಕ್ತವಾಗಿ ಚಟುವಟಿಕೆಯಿಂದ ಓಡಾಡಲು ಸಾಧ್ಯವಾಗದು. ದೇಹದಲ್ಲಿ ಪ್ರತಿರೋಧಕ ಶಕ್ತಿಯೂ ಕುಗ್ಗುವುದರಿಂದ ಜನರನ್ನು ಭೇಟಿ ಮಾಡುವಂತಿಲ್ಲ, ಪ್ರಚಾರ ಮಾಡುವಂತಿಲ್ಲ ಎಂದು ವೈದ್ಯರು ತನಗೆ ಸಲಹೆ ನೀಡಿರುವುದಾಗಿ ರಜನಿ ಸ್ಟೈಲ್‌ನಲ್ಲಿ ಬರೆದಿರುವ ಪತ್ರದಲ್ಲಿ ತಿಳಿಸಲಾಗಿದೆ. ಈ ಪತ್ರ ವೈರಲ್ ಆಗುತ್ತಿರುವಂತೆಯೇ ರಜನೀಕಾಂತ್ ಆರೋಗ್ಯದ ಬಗ್ಗೆ ಅಭಿಮಾನಿಗಳಲ್ಲಿ ಆತಂಕ ಮೂಡಿತ್ತು. ಗುರುವಾರ ಸ್ಪಷ್ಟನೆ ನೀಡಿರುವ ರಜನೀಕಾಂತ್, ಟ್ವಿಟರ್‌ನಲ್ಲಿ ವೈರಲ್ ಆಗಿರುವ ಪತ್ರ ನಕಲಿ, ಆದರೆ ಪತ್ರದಲ್ಲಿ ತನ್ನ ಆರೋಗ್ಯದ ಬಗ್ಗೆ ಇರುವ ಮಾಹಿತಿ ಸತ್ಯ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News