ಸಂಘಪರಿವಾರದ ಪ್ರತಿಭಟನೆ ಹಿನ್ನೆಲೆ: ಅಕ್ಷಯ್ ಕುಮಾರ್ ನಟನೆಯ ‘ಲಕ್ಷ್ಮೀ ಬಾಂಬ್’ ಚಿತ್ರದ ಹೆಸರು ಬದಲಾವಣೆ

Update: 2020-10-29 15:29 GMT

ಹೊಸದಿಲ್ಲಿ: ಸಂಘಪರಿವಾರ ಸಂಘಟನೆಗಳ ಪ್ರತಿಭಟನೆಯ ಬಳಿಕ ಅಕ್ಷಯ್ ಕುಮಾರ್ ನಟನೆಯ ಹೊಸ ಹಾರರ್ ಕಾಮಿಡಿ ಚಿತ್ರ ಲಕ್ಷ್ಮೀ ಬಾಂಬ್ ಚಿತ್ರದ ಹೆಸರನ್ನು ನಿರ್ಮಾಪಕರು ಬದಲಿಸಲು ನಿರ್ಧರಿಸಿದ್ದಾರೆ.

 ಲಕ್ಷ್ಮೀ ಬಾಂಬ್ ಹೆಸರಿನ ಚಿತ್ರವು ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುತ್ತದೆ ಹಾಗೂ ಲಕ್ಷ್ಮೀ ದೇವಿಗೆ ಅವಮಾನ ಉಂಟು ಮಾಡುತ್ತದೆ ಎಂದು ಸಂಘಟನೆಗಳು ವಾದಿಸಿದ್ದವು. ಕರ್ಣಿ ಸೇನೆ ಚಿತ್ರ ನಿರ್ಮಾಪಕರಿಗೆ ಕಾನೂನು ನೋಟಿಸ್‌ನ್ನು ಕಳುಹಿಸಿಕೊಟ್ಟಿತ್ತು. ಹೀಗಾಗಿ ನಿರ್ಮಾಪಕರು ಈ ಚಿತ್ರದ ಹೆಸರನ್ನು ಲಕ್ಷ್ಮೀ ಎಂದು ಬದಲಿಸಲು ಚಿಂತಿಸಿದ್ದಾರೆ.

ಲಕ್ಷ್ಮೀ ಚಿತ್ರ 2011ರಲ್ಲಿ ತೆರೆ ಕಂಡಿರುವ ತಮಿಳಿನ ಕಾಂಚನದ ರಿಮೇಕ್. ದೀಪಾವಳಿ ವೇಳೆಗೆ ನವೆಂಬರ್ 9ರಂದು ಡಿಸ್ನಿ-ಹಾಟ್‌ಸ್ಪಾರ್ ನಲ್ಲಿ ಈ ಚಿತ್ರ ಬಿಡುಗಡೆ ಯಾಗಲಿದೆ. ಕೊರೋನ ವೈರಸ್‌ನಿಂದಾಗಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗದ ಈ ಚಿತ್ರವನ್ನು ಡಿಸ್ನಿ 120 ಕೋ.ರೂ.ಗೆ ಸ್ವಾದೀನಪಡಿಸಿಕೊಂಡಾಗ ಈ ಚಿತ್ರ ಹೆಚ್ಚು ಸದ್ದು ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News