ಜಮಾಅತೆ ಇಸ್ಲಾಮಿ ಹಿಂದ್ ನ ವೆಲ್ಫೇರ್ ಫೌಂಡೇಶನ್, ಝಫರುಲ್ ಇಸ್ಲಾಂ ಖಾನ್ ನಿವಾಸದ ಮೇಲೆ ಎನ್‌ಐಎ ದಾಳಿ

Update: 2020-10-29 17:33 GMT

ಹೊಸದಿಲ್ಲಿ: ಜಮಾಅತೆ  ಇಸ್ಲಾಮಿ  ಹಿಂದ್ ನಡೆಸುತ್ತಿರುವ ಚಾರಿಟೇಬಲ್ ಟ್ರಸ್ಟ್ ಹ್ಯೂಮನ್ ವೆಲ್ಫೇರ್ ಫೌಂಡೇಶನ್‌ನ(ಎಚ್‌ಡಬ್ಲು ಎಫ್)ಕಚೇರಿಗಳ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಗುರುವಾರ ಬೆಳಗ್ಗೆ ದಾಳಿ ನಡೆಸಿದೆ.

ಹ್ಯೂಮನ್ ವೆಲ್ಫೇರ್ ಫೌಂಡೇಶನ್ ನಿರ್ದೇಶಕರಾದ ಮುಹಮ್ಮದ್ ಜಾಫರ್ ಅವರನ್ನು ಎನ್‌ಐಎ ವಿಚಾರಣೆಗಾಗಿ ಕಸ್ಟಡಿಗೆ ತೆಗೆದುಕೊಂಡಿತು. ಜಾಫರ್ ಜಮಾಅತೆ ನ ಉಪಾಧ್ಯಕ್ಷರಾಗಿದ್ದಾರೆ.

 ಚಾರಿಟಿ ಅಲಯನ್ಸ್‌ನ ಅಧ್ಯಕ್ಷರಾಗಿರುವ ಝಫರುಲ್ ಇಸ್ಲಾಮ್ ಖಾನ್ ಅವರ ನಿವಾಸದ ಮೇಲೆಯೂ ಎನ್‌ಐಎ ದಾಳಿ ನಡೆಸಿತು. ಖಾನ್ ಅವರು ದಿಲ್ಲಿ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷರು ಹಾಗೂ ಮಿಲ್ಲಿ ಗಝೆಟ್‌ನ ಸಂಪಾದಕರಾಗಿದ್ದಾರೆ.

ದಾಳಿಯಾಗಿರುವ ಎರಡು ಸ್ಥಳಗಳು ದಿಲ್ಲಿಯ ಓಖ್ಲಾ ಪ್ರದೇಶದಲ್ಲಿದ್ದು, ದಾಳಿ ಬೆಳಗ್ಗೆ 6 ಗಂಟೆಗೆ ಆರಂಭವಾಗಿದ್ದು, ಮಧ್ಯಾಹ್ನದ ತನಕವೂ ಮುಂದುವರಿದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News