ನಕಲಿ ಟಿಆರ್‌ಪಿ ಹಗರಣ: ಫಕ್ತ್ ಮರಾಠಿ ವಾಹಿನಿಯ ಮಾಲಿಕನಿಗೆ ಜಾಮೀನು

Update: 2020-10-29 17:36 GMT

ಮುಂಬೈ,ಅ.29: ನಕಲಿ ಟಿಆರ್‌ಪಿ ಹಗರಣದಲ್ಲಿ ಬಂಧಿಸಲ್ಪಟ್ಟಿದ್ದ ಫಕ್ತ್ ಮರಾಠಿ ವಾಹಿನಿಯ ಮಾಲಿಕ ಶಿರೀಷ ಪಟ್ಟಣಶೆಟ್ಟಿ ಅವರಿಗೆ ಇಲ್ಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಗುರುವಾರ ಜಾಮೀನು ಮಂಜೂರು ಮಾಡಿದೆ.

ತನ್ನ ಕಕ್ಷಿದಾರರು ಟಿಆರ್‌ಪಿ ರೇಟಿಂಗ್ ಪಾಯಿಂಟ್‌ಗಳಲ್ಲಿ ಯಾವುದೇ ಅಕ್ರಮಗಳನ್ನು ನಡೆಸಿರಲಿಲ್ಲ,ಫಕ್ತ್ ಮರಾಠಿ ವಾಹಿನಿಯ ಟಿಆರ್‌ಪಿ ಅಥವಾ ಆದಾಯವೂ ಹೆಚ್ಚಾಗಿರಲಿಲ್ಲ ಎಂದು ವಿಚಾರಣೆ ಸಂದರ್ಭ ವಾದಿಸಿದ ಪಟ್ಟಣಶೆಟ್ಟಿ ಪರ ವಕೀಲ ಅನಿಕೇತ ನಿಗಂ ಅವರು,ಇದು ಪ್ರತೀಕಾರದ ಕ್ರಮವಾಗಿದೆ ಎಂದು ಆರೋಪಿಸಿದ್ದರು.

ಜಾಹೀರಾತುಗಳನ್ನು ಆಕರ್ಷಿಸಲು ಕೆಲವು ವಾಹಿನಿಗಳು ಟಿಆರ್‌ಪಿ ರೇಟಿಂಗ್‌ನ್ನು ತಿರುಚುತ್ತಿವೆ ಎಂದು ಆರೋಪಿಸಿ ಬ್ರಾಡಕಾಸ್ಟ್ ಆಡಿಯನ್ಸ್ ರೀಸರ್ಚ ಕೌನ್ಸಿಲ್ ತನ್ನ ಫ್ರಾಂಚೈಸಿ ಹಂಸಾ ರೀಸರ್ಚ್ ಗ್ರೂಪ್ ಮೂಲಕ ಮುಂಬೈ ಪೊಲೀಸರಿಗೆ ದೂರು ಸಲ್ಲಿಸಿದ ಬಳಿಕ ನಕಲಿ ಟಿಆರ್‌ಪಿ ಹಗರಣ ಬೆಳಕಿಗೆ ಬಂದಿತ್ತು. ಹಗರಣಕ್ಕೆ ಸಂಬಂಧಿಸಿದಂತೆ ಈವರೆಗೆ ಕನಿಷ್ಠ 11 ಜನರನ್ನು ಪೊಲೀಸರು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News