ಪಾರ್ಥನೆ ಸಲ್ಲಿಸಲು ತೆರಳದಂತೆ ಫಾರೂಕ್ ಅಬ್ದುಲ್ಲಾಗೆ ಜಿಲ್ಲಾಡಳಿತದಿಂದ ತಡೆ: ನ್ಯಾಶನಲ್ ಕಾನ್ಫರೆನ್ಸ್ ಆರೋಪ

Update: 2020-10-30 16:56 GMT

ಶ್ರೀನಗನರ, ಅ. 30: ಮೀಲಾದುನ್ನಬಿ ಆಚರಣೆ ಹಿನ್ನೆಲೆಯಲ್ಲಿ ಶ್ರೀನಗರದ ಹಝ್ರತ್‌ಬಾಲ್ ದರ್ಗಾದಲ್ಲಿ ಪ್ರಾರ್ಥಿಸುವುದಕ್ಕೆ ತೆರಳಲು ಜಮ್ಮು ಹಾಗೂ ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಶನಲ್ ಕಾನ್ಫರೆನ್ಸ್‌ನ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರಿಗೆ ಜಿಲ್ಲಾಡಳಿತ ಶುಕ್ರವಾರ ತಡೆ ಒಡ್ಡಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಆರೋಪಿಸದೆ. 

ಪ್ರಾರ್ಥಿಸುವ ಮೂಲಭೂತ ಹಕ್ಕಿಗೆ ತಡೆ ಒಡ್ಡಿರುವುದು ಖಂಡನೀಯ ಎಂದು ನ್ಯಾಷನಲ್ ಕಾನ್ಫರೆನ್ಸ್ ಟ್ವೀಟ್‌ನಲ್ಲಿ ಹೇಳಿದೆ. ‘‘ಜಮ್ಮು ಹಾಗೂ ಕಾಶ್ಮೀರ ಜಿಲ್ಲಾಡಳಿತ ಫಾರೂಕ್ ಅಬ್ದುಲ್ಲಾ ಅವರು ಮನೆಯಿಂದ ಹೊರಗೆ ಬರದಂತೆ ನಿರ್ಬಂಧ ವಿಧಿಸಿತ್ತು ಹಾಗೂ ಹಝ್ರತ್‌ಬಾಲ್ ದರ್ಗಾಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸುವುದಕ್ಕೆ ತಡೆ ಒಡ್ಡಿತು’’ ಎಂದು ನ್ಯಾಶನಲ್ ಕಾನ್ಫರೆನ್ಸ್ ಹೇಳಿದೆ. ಫಾರೂಕ್ ಅಬ್ದುಲ್ಲಾ ಅವರು ದರ್ಗಾ ತೆರಳುವುದಕ್ಕೆ ಜಿಲ್ಲಾಡಳಿತ ತಡೆ ಒಡ್ಡಿರುವುದನ್ನು ಟೀಕಿಸಿ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಶಕ್ರವಾರ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News