ಜಮ್ಮು ಕಾಶ್ಮೀರದ ಚುನಾವಣಾ ಆಯುಕ್ತರಾಗಿ ಕೆ.ಕೆ. ಶರ್ಮಾ ನೇಮಕ

Update: 2020-10-30 18:11 GMT

ಶ್ರೀನಗರ, ಅ. 30: ಜಮ್ಮು ಹಾಗೂ ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಅವರ ಸಲಹೆಗಾರರಾಗಿರುವ ಕೆ.ಕೆ. ಶರ್ಮಾ ಅವರು ಶುಕ್ರವಾರ ತನ್ನ ಹುದ್ದೆಗೆ ರಾಜೀನಾಮೆ ನೀಡಿ ರಾಜ್ಯ ಚುನಾವಣಾ ಆಯುಕ್ತರಾಗಿ ನೇಮಕರಾಗಿದ್ದಾರೆ. ‘‘ಜಮ್ಮು ಹಾಗೂ ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಅವರ ಸಲಹೆಗಾರರಾಗಿದ್ದ ಕೆ.ಕೆ. ಶರ್ಮಾ ಅವರು ಹುದ್ದೆಗೆ ರಾಜೀನಾಮೆ ನೀಡಿ, ಚುನಾವಣಾ ಆಯುಕ್ತರಾಗಿ ನೇಮಕರಾಗಿದ್ದಾರೆ’’ ಎಂದು ಸರಕಾರದ ವಕ್ತಾರ ರೋಹಿತ್ ಕನ್ಸಾಲ್ ಅವರು ಟ್ವೀಟ್ ಮಾಡಿದ್ದಾರೆ.

1983ನೇ ಬ್ಯಾಚ್‌ನ ಅರುಣಾಚಲ ಪ್ರದೇಶ ಹಾಗೂ ಗೋವಾ, ಮಿಝೋರಾಮ್ ಕೇಂದ್ರಾಡಳಿತ ಪ್ರದೇಶಗಳ ಕೇಡರ್‌ನ ಅಧಿಕಾರಿಯಾಗಿದ್ದ ಶರ್ಮಾ ಅವರು ಲೆಫ್ಟಿನೆಂಟ್ ಗವರ್ನರ್ ಅವರ ಸಲಹೆಗಾರರಾಗಿ ಕಳೆದ ವರ್ಷ ನವೆಂಬರ್‌ನಲ್ಲಿ ನೇಮಕರಾಗಿದ್ದರು. ಶರ್ಮಾ ಅವರು ತನ್ನ 30 ವರ್ಷಗಳ ಕರ್ತವ್ಯದ ಅವಧಿಯಲ್ಲಿ ದಿಲ್ಲಿ ಹಾಗೂ ಗೋವಾದ ಮುಖ್ಯ ಕಾರ್ಯದರ್ಶಿ ಸೇರಿದಂತೆ ಹಲವು ಹುದ್ದೆಗಳನ್ನು ನಿರ್ವಹಿಸಿದ್ದರು. ನಿವೃತ್ತಿಯ ಮೊದಲು ಅವರು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಚಂಡಿಗಢದ ಆಡಳಿತದ ಸಲಹೆಗಾರರಾಗಿ ಕೂಡ ಅವರು ಕರ್ತವ್ಯ ನಿರ್ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News