ಉಡುಪಿ: ಮಟ್ಟು ಬೀಚ್‌ನಲ್ಲಿ ಕರಾವಳಿ ಕಾವಲು ಪೊಲೀಸ್ ಘಟಕದಿಂದ ಏಕತಾ ಓಟ

Update: 2020-10-31 10:25 GMT

ಉಡುಪಿ, ಅ.31: ರಾಷ್ಟ್ರೀಯ ಏಕತಾ ದಿನಾಚರಣೆ ಪ್ರಯುಕ್ತ ಮಲ್ಪೆ ಕರಾವಳಿ ಕಾವಲು ಪೊಲೀಸ್ ಘಟಕದ ವತಿಯಿಂದ ಸಾರ್ವಜನಿಕರಿಗೆ ಇಂದು ಮಟ್ಟು ಬೀಚ್‌ನಿಂದ ಪಡುಕೆರೆ ಪಂಡರೀನಾಥ ಭಜನಾ ಮಂದಿರದವರೆಗೆ ಮೂರು ಕಿ.ಮೀ. ದೂರದ ಏಕತಾ ಓಟವನ್ನು ಏರ್ಪಡಿಸಲಾಗಿತ್ತು.

ಮಟ್ಟು ಬೀಚ್‌ನಲ್ಲಿ ಏಕತಾ ಓಟಕ್ಕೆ ಚಾಲನೆ ನೀಡಿದ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಮಾತನಾಡಿ, ಸಮೃದ್ಧ ಭಾರತ ನಿರ್ಮಾಣಕ್ಕೆ ಯುವ ಸಮು ದಾಯ ಸಜ್ಜಾಗಬೇಕು. ಅದೇ ರೀತಿ ಮಾದಕ ದ್ರವ್ಯದ ವಿರುದ್ದ ನಡೆಯುತ್ತಿರುವ ಹೋರಾಟದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದು ತಿಳಿಸಿದರು.

ಮಲ್ಪೆ ಕರಾವಳಿ ಕಾವಲು ಪೊಲೀಸ್ ಅಧೀಕ್ಷಕ ಆರ್.ಚೇತನ್ ಏಕತಾ ದಿನಾಚರಣೆಯ ಪ್ರತಿಜ್ಞಾ ವಿಧಿ ಭೋದಿಸಿದರು. ಓಟದಲ್ಲಿ ಉಡುಪಿ ಪೊಲೀಸ್ ತರಬೇತಿ ಶಾಲೆಯ ಪ್ರಶಿಕ್ಷಣಾರ್ಥಿಗಳು, ಯುನೈಟೆಡ್ ಅಥ್ಲೆಟಿಕ್ಸ್, ಟ್ರಾಕ್ ಆ್ಯಂಡ್ ಫೀಲ್ಡ್, ಸ್ಟೇಡಿಯಂ ಸ್ಪ್ಲಿಂಟರ್ಸ್‌, ನೇಶನ್ ಫಸ್ಟ್ ಅಥ್ಲೆಟ್ಸ್‌ನ ಸದಸ್ಯರು, ಪಿಪಿಸಿ ವಿದ್ಯಾರ್ಥಿಗಳು, ಕರವಾಳಿ ಕಾವಲು ಪೊಲೀಸ್ ಘಟಕದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸೇರಿದಂತೆ ಒಟ್ಟು 350 ಮಂದಿ ಭಾಗವಹಿಸಿದರು.

ಸಮಾರೋಪ: ಸಮಾರೋಪ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಜಿ. ಜಗದೀಶ್ ವಿಜೇತರಿಗೆ ಬಹುಮಾನ ವಿತರಿಸಿದರು. ಅಧ್ಯಕ್ಷತೆಯನ್ನು ಪೊಲೀಸ್ ಅಧೀಕ್ಷಕ ಆರ್.ಚೇತನ್ ವಹಿಸಿದ್ದರು. ಜಿಲ್ಲಾ ಹೆಚ್ಚುವರಿ ಎಸ್ಪಿ ಕುಮಾರಚಂದ್ರ ಮುಖ್ಯ ಅತಿಥಿಯಾಗಿದ್ದರು.

ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಡಿವೈಎಸ್ಪಿ ರಾಘವೇಂದ್ರ, ಕರಾವಳಿ ಕವಾಲು ಪೊಲೀಸ್ ಘಟಕದ ಡಿವೈಎಸ್ಪಿ ಪ್ರವೀಣ್ ಎಚ್.ನಾಯಕ್, ಪೊಲೀಸ್ ನಿರೀಕ್ಷಕ ರುಗಳಾದ ಗಂಗೀರೆಡ್ಡಿ, ರವೀಶ್ ನಾಯಕ್, ರತ್ನಕುಮಾರ್, ಅನಂತ ಪದ್ಮ ನಾಭ ಕೆ.ವಿ., ಹೋಮ್ ಗಾರ್ಡ್ ಕಮಾಂಡೆಂಟ್ ಡಾ.ಪ್ರಶಾಂತ್ ಶೆಟ್ಟಿ ಮೊದ ಲಾದವರು ಉಪಸ್ಥಿತರಿದ್ದರು.

ಸಿಎಸ್‌ಪಿ ಘಟಕದ ಗುಪ್ತವಾರ್ತೆ ವಿಭಾಗದ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ಏಕತಾ ಓಟದ ವಿಜೇತರ ವಿವರ

ಮಹಿಳಾ ವಿಭಾಗ: ಪ್ರ- ಪ್ರಜ್ಞಾ ಕೆ., ದ್ವಿ- ಪ್ರೀತಿ ಶೆಟ್ಟಿ, ತೃ- ಅರ್ಣಿಕಾ ವರ್ಷ ಡಿಸೋಜ. ಕಿರಿಯ ವಿಭಾಗ(10ವರ್ಷದೊಳಗಿನ): ಪ್ರ- ಮೋದ ಪೌಜಾನ್, ದ್ವಿ- ಆರಾಧ್ಯ ಎಂ.ಬೆಳ್ವೆ, ತೃ- ಸಮೃದ್ಧಿ ಪಂಡಿತ್ ಮತ್ತು ಅಭಿಷಾ ವಿ.ಎಸ್. 18ವರ್ಷದೊಳಗಿನ ವಿಭಾಗ: ಪ್ರ- ದಿಗಂತ್, ದ್ವಿ- ಶಶಾಂಕ್, ತೃ- ಯತೀಶ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News