×
Ad

ರೂಡಿ ಕೊರ್ಟ್‌ಜೆನ್ ದಾಖಲೆ ಮುರಿದ ಅಲೀಮ್ ದಾರ್

Update: 2020-11-01 23:32 IST

ರಾವಲ್ಪಿಂಡಿ, ನ.1: ಪಾಕಿಸ್ತಾನದ ಅಂಪೈರ್ ಅಲೀಮ್ ದಾರ್ ಅವರು ಪಾಕಿಸ್ತಾನ ಮತ್ತು ಝಿಂಬಾಬ್ವೆ ನಡುವಿನ ಏಕದಿನ ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸುವ ಮೂಲಕ ದಕ್ಷಿಣ ಆಫ್ರಿಕಾ ಅಂಪೈರ್ ರೂಡಿ ಕೊರ್ಟ್‌ಜೆನ್ ದಾಖಲೆ ಮುರಿದಿದ್ದಾರೆ.

ಅಲೀಮ್ ದಾರ್ 210ನೇ ಏಕದಿನ ಪಂದ್ಯದಲ್ಲಿ ಕಾರ್ಯನಿರ್ವಹಿಸಿ ದಾಖಲೆ ಬರೆದಿದ್ದಾರೆ. ಅತೀ ಹೆಚ್ಚು ಏಕದಿನ ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದ್ದ ರೂಡಿ ಕೊರ್ಟ್‌ಜೆನ್(209) ಅವರ ದಾಖಲೆಯನ್ನು ಅಲೀಮ್ ದಾರ್ ಹಿಂದಿಕ್ಕಿದ್ದಾರೆ. ಪಾಕಿಸ್ತಾನದ 52 ರ ಹರೆಯದ ದಾರ್ ಅತೀ ಹೆಚ್ಚು ಟೆಸ್ಟ್ ಪಂದ್ಯಗಳಲ್ಲಿ ಅಂಪೈರ್ ಆಗಿದ್ದ ದಾಖಲೆಯನ್ನು ಹೊಂದಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಪರ್ತ್‌ನಲ್ಲಿ ನಡೆದ ಆಸ್ಟ್ರೇಲಿಯ -ನ್ಯೂಝಿಲ್ಯಾಂಡ್ ತಂಡಗಳ ಪಂದ್ಯದಲ್ಲಿ ಅಂಪೈರ್ ಆಗಿ ಮೈದಾನಕ್ಕಿಳಿಯುವ ಮೂಲಕ 132 ನೇ ಟೆಸ್ಟ್‌ನಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ ದಾಖಲೆ ಬರೆದಿದ್ದರು.ಜಮೈಕಾದ ಸ್ಟೀವ್ ಬಕ್ನರ್‌ರ ದಾಖಲೆಯನ್ನು ಮುರಿದಿದ್ದರು. ಅವರು 45 ಟ್ವೆಂಟಿ-20 ಪಂದ್ಯಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಟೆಸ್ಟ್, ಏಕದಿನ ಮತ್ತು ಟ್ವೆಂಟಿ -20 ಸೇರಿದಂತೆ 388 ಕ್ಕೂ ಹೆಚ್ಚು ಅಂತರ್‌ರಾಷ್ಟ್ರೀಯ ಪಂದ್ಯಗಳಲ್ಲಿ ಕಾರ್ಯ ನಿರ್ವಹಿಸಿದ ದಾಖಲೆಯನ್ನು ದಾರ್ ತನ್ನ ಹೆಸರಿನಲ್ಲಿ ಬರೆದಿದ್ದಾರೆ.

ಅಂಪೈರಿಂಗ್ ಆಗಿ ವೃತ್ತಿ ಬದುಕು ಪ್ರಾರಂಭಿಸುವ ಮುನ್ನ ದಾರ್ ಆಲ್‌ರೌಂಡರ್ ಆಗಿ ಒಂದು ದಶಕಕ್ಕೂ ಹೆಚ್ಚು ಕಾಲ ಪಾಕಿಸ್ತಾನದಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದರು. ಫೆಬ್ರವರಿ 2000ರಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ಏಕದಿನ ಪಂದ್ಯದಲ್ಲಿ ಅಂಪೈರ್ ಆಗಿ ವೃತ್ತಿ ಆರಂಭಿಸಿದ್ದರು. ಅವರು 16 ವರ್ಷಗಳಿಂದ ಐಸಿಸಿಯ ಉನ್ನತ ಅಂಪೈರ್‌ಗಳ ಸಮಿತಿ ಭಾಗವಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News