ಉ.ಪ್ರ:ರಾಜ್ಯಸಭೆಗೆ ಕೇಂದ್ರ ಸಚಿವ ಪುರಿ ಸೇರಿದಂತೆ 10 ಜನರ ಅವಿರೋಧ ಆಯ್ಕೆ
Update: 2020-11-02 22:29 IST
ಹೊಸದಿಲ್ಲಿ,ನ.2: ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಮತ್ತು ಇತರ ಒಂಭತ್ತು ಜನರು ಸೋಮವಾರ ಉತ್ತರ ಪ್ರದೇಶದಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಪೈಕಿ ಎಂಟು ಜನರು ಬಿಜೆಪಿಗೆ ಸೇರಿದ್ದರೆ ತಲಾ ಓರ್ವರು ಎಸ್‌ಪಿ ಮತ್ತು ಬಿಎಸ್ಪಿಗೆ ಸೇರಿದ್ದಾರೆ.
ಪುರಿಯವರ ಜೊತೆಗೆ ನೀರಜ್ ಶೇಖರ್,ಅರುಣ್ ಸಿಂಗ್,ಗೀತಾ ಶಾಖ್ಯ,ಹರಿದ್ವಾರ ದುಬೆ,ಬ್ರಿಜ್‌ಲಾಲ್,ಬಿ.ಎಲ್.ವರ್ಮಾ ಮತ್ತು ಸೀಮಾ ದ್ವಿವೇದಿ (ಎಲ್ಲರೂ ಬಿಜೆಪಿ),ರಾಮಗೋಪಾಲ ಯಾದವ್ (ಎಸ್ಪಿ) ಮತ್ತು ರಾಮ್ಜಿ ಗೌತಮ್ (ಬಿಎಸ್ಪಿ) ಅವರು ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆಂದು ಸಹಾಯಕ ಚುನಾವಣಾಧಿಕಾರಿ ಮುಹಮ್ಮದ್ ಮುಷಾಹಿದ್ ಅವರು ಘೋಷಿಸಿದರು.