×
Ad

ಅಮೆರಿಕದಲ್ಲಿ ಹೈದರಾಬಾದ್ ಮೂಲದ ವ್ಯಕ್ತಿಯ ಇರಿದು ಕೊಲೆ

Update: 2020-11-03 11:35 IST

ಅಟ್ಲಾಂಟ (ಅಮೆರಿಕ), ನ. 3: ಹೈದರಾಬಾದ್ ನಿವಾಸಿ, 37 ವರ್ಷದ ವ್ಯಕ್ತಿಯೊಬ್ಬರನ್ನು ಅಮೆರಿಕದ ಜಾರ್ಜಿಯ ರಾಜ್ಯದಲ್ಲಿ ರವಿವಾರ ಇರಿದು ಕೊಲ್ಲಲಾಗಿದೆ.

ಅವರಿಗೆ ಹಲವು ಬಾರಿ ಚೂರಿಯಿಂದ ತಿವಿಯಲಾಗಿದ್ದು, ಮೃತದೇಹವು ಅವರ ಮನೆಯ ಹೊರಗೆ ಪತ್ತೆಯಾಗಿದೆ.

ಮೃತ ಮುಹಮ್ಮದ್ ಆರಿಫ್ ಮುಹಿಯುದ್ದೀನ್ ಜಾರ್ಜಿಯದಲ್ಲಿ ಕಳೆದ 10 ವರ್ಷಗಳಿಂದ ದಿನಸಿ ಅಂಗಡಿಯೊಂದನ್ನು ನಡೆಸುತ್ತಿದ್ದರು.

ಅವರ ಅಂಗಡಿಯ ಓರ್ವ ಉದ್ಯೋಗಿ ಸೇರಿದಂತೆ ಹಲವು ಹಂತಕರು ಸಿಸಿಟಿವಿಯಲ್ಲಿ ಸೆರೆಯಾಗಿದ್ದಾರೆ.

ಅಮೆರಿಕಕ್ಕೆ ಹೋಗಲು ಸರಕಾರದ ನೆರವು ಕೋರಿದ ಕುಟುಂಬ

ಮೃತರ ಅಂತ್ಯಸಂಸ್ಕಾರ ನೆರವೇರಿಸುವುದಕ್ಕಾಗಿ ಅಮೆರಿಕಕ್ಕೆ ಹೋಗಲು ಹೈದರಾಬಾದ್‌ನಲ್ಲಿರುವ ಅವರ ಕುಟುಂಬ ಸದಸ್ಯರು ಸರಕಾರದ ನೆರವು ಕೋರಿದ್ದಾರೆ.

‘‘ಅಮೆರಿಕದಲ್ಲಿ ನಾವು ಅವರ ಅಂತ್ಯಸಂಸ್ಕಾರ ನೆರವೇರಿಸಲು ಸಾಧ್ಯವಾಗುವಂತೆ ತುರ್ತು ವೀಸಾಗಳ ಆಧಾರದಲ್ಲಿ ನನ್ನ ಮತ್ತು ನನ್ನ ತಂದೆಯ ಅವೆುರಿಕ ಪ್ರಯಾಣಕ್ಕೆ ವ್ಯವಸ್ಥೆ ಮಾಡಬೇಕೆಂದು ನಾನು ಸರಕಾರವನ್ನು ಕೋರುತ್ತೇನೆ ಮೃತ ಮುಹಿಯುದ್ದೀನ್‌ರ ಪತ್ನಿ ಮೆಹ್ನಾಝ್ ಫಾತಿಮಾ ಹೇಳಿದ್ದಾರೆ.

‘‘ರವಿವಾರ ಬೆಳಗ್ಗೆ ಸುಮಾರು 9 ಗಂಟೆಗೆ ನಾನು ಪತಿಯೊಂದಿಗೆ ಮಾತನಾಡಿದೆ. ಅರ್ಧ ಗಂಟೆಯಲ್ಲಿ ನಾನು ಕರೆ ಮಾಡುತ್ತೇನೆ ಎಂದು ಅವರು ನನಗೆ ಹೇಳಿದರು. ಆದರೆ, ಮತ್ತೆ ನನಗೆ ಅವರು ಕರೆ ಮಾಡಲಿಲ್ಲ. ಬಳಿಕ, ಅಪರಿಚಿತ ವ್ಯಕ್ತಿಯೋರ್ವ ನನ್ನ ಗಂಡನನ್ನು ಇರಿದು ಕೊಂದಿದ್ದಾನೆ ಎನ್ನುವ ವಿಷಯ ನನಗೆ ನನ್ನ ಅತ್ತಿಗೆಯ ಮೂಲಕ ತಿಳಿಯಿತು. ಈಗ ಅವರ ಮೃತದೇಹ ಜಾರ್ಜಿಯದ ಆಸ್ಪತ್ರೆಯೊಂದರಲ್ಲಿದೆ. ಅವರ ಬಳಿ ಯಾವ ಕುಟುಂಬ ಸದಸ್ಯರಿಲ್ಲ’’ ಎಂದು ಫಾತಿಮಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News