ರಿಲಯನ್ಸ್ ಷೇರುಗಳಿಗೆ ದೊಡ್ಡ ಹೊಡೆತ; ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಕುಸಿದ ಮುಕೇಶ್ ಅಂಬಾನಿ

Update: 2020-11-03 06:47 GMT

ಮುಂಬೈ: ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‍ನ ಸೆಪ್ಟೆಂಬರ್ ಅಂತ್ಯಕ್ಕೆ ಕೊನೆಗೊಂಡ ತ್ರೈಮಾಸಿಕದ ನಿವ್ವಳ ಲಾಭ ಕಳೆದ ವರ್ಷಕ್ಕೆ ಹೋಲಿಸಿದಾಗ ಶೇ. 15ರಷ್ಟು ಕುಸಿತ ಕಂಡ ಬೆನ್ನಲ್ಲೇ ಸೋಮವಾರ  ಷೇರು ಮಾರುಕಟ್ಟೆಯಲ್ಲಿ ಕಂಪೆನಿಯ ಷೇರುಗಳ ಬೆಲೆ ಶೇ. 8.62ರಷ್ಟು ಇಳಿಕೆ ಕಂಡು ರೂ. 1877 ತಲುಪಿವೆ. ಅಷ್ಟೇ ಅಲ್ಲದೆ ಕಂಪೆನಿಯ ಪಾಟ್ರ್ಲಿ ಪೇಯ್ಡ್ ಷೇರುಗಳ ಬೆಲೆ ಶೇ. 10ರಷ್ಟು ಕುಸಿತ ಕಂಡು ರೂ. 1,066 ತಲುಪಿದ್ದರಿಂದ  ಕಂಪೆನಿ ಒಂದೇ ದಿನದಲ್ಲಿ ರೂ. 1 ಲಕ್ಷ ಕೋಟಿ ಕಳೆದುಕೊಳ್ಳುವಂತಾಗಿದೆ.

ಇದರ ನೇರ ಪರಿಣಾಮ ಎಂಬಂತೆ ಮುಕೇಶ್ ಅಂಬಾನಿ ಅವರ ಒಟ್ಟು ಸಂಪತ್ತಿನ ಮೌಲ್ಯ ಕೂಡ 6.8 ಬಿಲಿಯನ್ ಡಾಲರ್‍ನಷ್ಟು ಇಳಿಕೆ ಕಂಡಿದೆ ಹಾಗೂ ಅವರು ಜಗತ್ತಿನ ಆರನೇ ಅತ್ಯಂತ ಶ್ರೀಮಂತ ವ್ಯಕ್ತಿ ಸ್ಥಾನದಿಂದ ಕೆಳಗಿಳಿದು ಒಂಬತ್ತನೇ ಸ್ಥಾನಕ್ಕೆ ಕುಸಿದಿದ್ದಾರೆ.  ಫೋಬ್ರ್ಸ್ ರಿಯಲ್ ಟೈಮ್ಸ್ ಬಿಲಿಯನೇರ್ಸ್ ಪಟ್ಟಿಯ ಪ್ರಕಾರ ಅಂಬಾನಿ ಅವರ ಒಟ್ಟು ಸಂಪತ್ತಿನ ಮೌಲ್ಯ ಈಗ 71.5 ಬಿಲಿಯನ್ ಡಾಲರ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News